Andhra Chief Minister injured : ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಅವರ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ವೇಮಂತ ಸರ್ಯಾರ್ ಬಸ್ ಯಾತ್ರೆಯ ಅಂಗವಾಗಿ ಸಿಎಂ ಜಗನ್ ಇಂದು ವಿಜಯವಾಡಕ್ಕೆ ಭೇಟಿ ನೀಡಿದ್ದರು. ವಿಜಯವಾಡ ಸಿಂಗ್ ನಗರದಲ್ಲಿ ಅವರು ಬಸ್‌ ಮೇಲೆ ನಿಂತು ಮಾತನಾಡುತ್ತಿದ್ದ ವೇಳೆ ಕೆಲವು ಪುಂಡ ಪೋಕರಿಗಳು ಅವರ ಮೇಲೆ ಕಲ್ಲು ಎಸೆದಿದ್ದಾರೆ. ಘಟನೆಯಲ್ಲಿ ಸಿಎಂ ಜಗನ್ ಅವರ ಎಡಗಣ್ಣಿಗೆ ಬಲವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ.. 


COMMERCIAL BREAK
SCROLL TO CONTINUE READING

ಪಕ್ಕದಲ್ಲಿಯೇ ವೈಎಸ್‌ಆರ್‌ ಪಕ್ಷದ ನಾಯಕ ವೆಲ್ಲಂಪಳ್ಳಿಗೆ ಅವರಿಗೂ ಸಹ ಕಲ್ಲು ತಾಕಿದೆ. ತಕ್ಷಣ ಭದ್ರತಾ ಸಿಬ್ಬಂದಿ ಸಿಎಂ ಜಗನ್ ಅವರನ್ನು ಬಸ್ ಒಳಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಪೊಲೀಸರು ದಾಳಿಕೋರನನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಇದೇ ವೇಳೆ ಕದಿರಿಯಲ್ಲಿಯೂ ಸಿಎಂ ಜಗನ್ ಮೇಲೆ ಅಪರಿಚಿತರಿಂದ ಚಪ್ಪಲಿಯಿಂದ ಹಲ್ಲೆ ನಡೆದಿರುವುದು ಗೊತ್ತಾಗಿದೆ.


ಇದನ್ನೂ ಓದಿ:ʻಮೋದಿ ಗ್ಯಾರಂಟಿʼ ಹೆಸರಿನ ಬಿಜೆಪಿ ಪ್ರಣಾಳಿಕೆ ಬಿಡುಗಡೆ.. ಲೋಕ ಅಖಾಡಕ್ಕೆ ʻಸಂಕಲ್ಪ ಪತ್ರʼದ ತಂತ್ರ !


ಇನ್ನು ಘಟನೆಯಲ್ಲಿ ಸಿಎಂ ಜಗನ್ ಕಣ್ಣಿಗೆ ತೀವ್ರ ಗಾಯವಾಗಿದೆ. ವೈದ್ಯರು ಬಸ್‌ನಲ್ಲಿಯೇ ವಿಶೇಷ ಚಿಕಿತ್ಸೆ ನೀಡಿದ್ದಾರೆ. ಕಣ್ಣಿನ ಮೇಲಿನ ಭಾಗದಲ್ಲಾದ ಗಾಯವನ್ನು ಸ್ವಚ್ಛಗೊಳಿಸಿ ಪ್ಲಾಸ್ಟರ್ ಹಾಕಲಾಗಿದೆ. ಒಂದು ವೇಳೆ ಕಣ್ಣಿಗೆ ಕಲ್ಲು ತಗುಲಿದ್ದರೇ ಕಣ್ಣಿಗೆ ಗಂಭೀರ ಗಾಯವಾಗುತ್ತಿತ್ತು. ಸಿಎಂ ಜಗನ್ ಜನ ಬೆಂಬಲ ಕಂಡು ಸಹಿಸಲಾಗದೆ ಟಿಡಿಪಿ ಇಂತಹ ನೀಚ ಕೆಲಸಗಳನ್ನು ಮಾಡಿಸುತ್ತಿದೆ ಎಂದು ವೈಸಿಪಿ ನಾಯಕರು ಟೀಕಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.