ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಕ್ರಮಗಳ ಬೇಡಿಕೆಯನ್ನು ಚಂದ್ರಬಾಬು ನಾಯ್ಡು ಮತ್ತೊಮ್ಮೆ  ಪುನರುಚ್ಚರಿಸಿದ್ದಾರೆ. 


COMMERCIAL BREAK
SCROLL TO CONTINUE READING

ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು , ಬಿಜೆಪಿಯು ತೆಲುಗು ಜನರ ಭಾವನೆಗಳ ಜೊತೆ ಆಟವಾಡಬಾರದು, ಈ ಹಿಂದೆ ತೆಲುಗು ಜನರನ್ನು ಕೆರಳಿಸಿದ್ದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಇದನ್ನು ಬಿಜೆಪಿಯು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದರು. ಕೇಂದ್ರ ಸರ್ಕಾರವು  ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಿದೆ ಆದರೆ ಅದು ಯಾವದು ಕೂಡಾ  ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದರು.


ರಾಜ್ಯದ ಹಿತಾಸಕ್ತಿಯ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ, ಕೇಂದ್ರವು ಜನರ ಭಾವನೆಗಳನ್ನು ಗೌರವಿಸಬೇಕು  ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಜೆಪಿಗೆ ಎಚ್ಚರಿಕೆ ನೀಡಿದರು. ಇತ್ತೀಚಿಗಿನ ದಿನಗಳಲ್ಲಿ ಟಿಡಿಪಿ ಮತ್ತು ಕೇಂದ್ರ ಸರ್ಕಾರದ ನಡುವೆ ವಿಶೇಷ ಸ್ಥಾನಮಾನದ ವಿಷಯದಲ್ಲಿ ನಿರಂತರವಾಗಿ ಶೀತಲ ಸಮರವೆರ್ಪಟ್ಟಿದೆ.