ನವದೆಹಲಿ: ವೈಎಸ್ಆರ್ ಕಾಂಗ್ರೆಸ್, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೇರಿದಂತೆ ಇತರ ವಿರೋಧ ಪಕ್ಷಗಳು ಆಂಧ್ರಪ್ರದೇಶಕ್ಕೆ 'ವಿಶೇಷ ರಾಜ್ಯ'ದ ಸ್ಥಾನಮಾನಕ್ಕೆ ಒತ್ತಾಯಿಸಿ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸಿವೆ. ವೈಎಸ್ಆರ್ ಮತ್ತು ಟಿಡಿಪಿ ರಾಜ್ಯದ ಹಲವು ಭಾಗಗಳಲ್ಲಿ ಹೆದ್ದಾರಿಯನ್ನು ಬಂದ್ ಮಾಡಿವೆ. 



COMMERCIAL BREAK
SCROLL TO CONTINUE READING

ಮತ್ತೊಂದೆಡೆ, ದೆಹಲಿಯಲ್ಲಿ ಆಂಧ್ರಪ್ರದೇಶಕ್ಕೆ 'ವಿಶೇಷ ರಾಜ್ಯ'ದ ಸ್ಥಾನಮಾನಕ್ಕೆ ಆಗ್ರಹಿಸಿ ಪಾರ್ಲಿಮೆಂಟ್ ಹೌಸ್ ಕ್ಯಾಂಪಸ್ನಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿಭಟನೆ ನಡೆಸುತ್ತಿದೆ.



ಲೋಕಸಭೆಯಲ್ಲಿ ಸದನದ ವಿಚಾರಣೆ ಪ್ರಾರಂಭವಾದ ತಕ್ಷಣ ಸ್ಪೀಕರ್ ಮುಂಭಾಗದಲ್ಲಿ ಅನೇಕ ಸಂಸದರು ತಮ್ಮ ಕೈಯಲ್ಲಿ ಪ್ಲ್ಯಾಕರ್ಗಳನ್ನು ಹಿಡಿದು ಕೂಗುತ್ತಿದ್ದರು. ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಮಧ್ಯಾಹ್ನ 12 ರವರೆಗೆ ಸದನದ ಕಲಾಪವನ್ನು ಮುಂದೂಡಿದರು.