ಅಮರಾವತಿ : ಆಂಧ್ರಪ್ರದೇಶವು 2029ರ ಹೊತ್ತಿಗೆ ದೇಶದಲ್ಲಿಯೇ ನಂ.1 ಸ್ಥಾನ ಪಡೆಯಲಿದೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಉದ್ಯಮದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಚಂದ್ರಬಾಬು ನಾಯ್ಡು, "ಭಾರತದ 2022 ರ ವೇಳೆಗೆ ಆಂಧ್ರಪ್ರದೇಶವು ಭಾರತದ ಅಗ್ರ ಮೂರು ರಾಜ್ಯಗಳಲ್ಲಿ ಒಂದಾಗಲಿದೆ ಮತ್ತು 2029 ರ ಹೊತ್ತಿಗೆ ನಾವು ದೇಶದಲ್ಲಿಯೇ ಮೊದಲ ಸ್ಥಾನ ಪಡೆಯಲಿದ್ದೇವೆ" ಎಂದು ಹೇಳಿದರು.


ಜೊತೆಗೆ ಅಲೆಕ್ಸಾ ಅಥವಾ ಗೂಗಲ್ನ ಮಟ್ಟದಲ್ಲಿ ಸರ್ಕಾರವನ್ನು ತರುವ ಬಯಕೆಯನ್ನೂ ನಾಯ್ಡು ವ್ಯಕ್ತಪಡಿಸಿದ್ದಾರೆ.
"ನಾನು ಅಲೆಕ್ಸಾ ಅಥವಾ ಗೂಗಲ್ನ ಮಟ್ಟದಲ್ಲಿ ಸರ್ಕಾರವನ್ನು ಹಾಕಬೇಕೆಂದು ನಾನು ಬಯಸುತ್ತೇನೆ . ಯಾರು ಏನೇ ಕೇಳಿದರು, ಅದಕ್ಕೆ ಸರ್ಕಾರ ಉತ್ತರಿಸುವಂತಾಗಬೇಕು" ಎಂದು ಅವರು ಹೇಳಿದರು.


ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸಿಐಐ ಆಯೋಜಿಸಿದ್ದ ಈ ಸಮ್ಮೇಳನವು  ರಾಜ್ಯದ ಸಾರ್ವಜನಿಕ-ಖಾಸಗಿ ಬಂಡವಾಳವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮೂರು ದಿನಗಳ ಸಿಐಐ ಸಹಭಾಗಿತ್ವ ಶೃಂಗಸಭೆ ಇಂದು ಕೊನೆಗೊಳ್ಳುತ್ತದೆ.