Davanagere: ANEC New Corona Risk - ದೇಶ ಹಾಗೂ ವಿಶ್ವಾದ್ಯಂತ ಕೊರೊನಾ ವೈರಸ್ (Coronavirus) ನ ಪ್ರಕೋಪ (Covid-19 Pandemic)ಇನ್ನೂ ಮುಂದುವರೆದಿದೆ. ಏತನ್ಮಧ್ಯೆ ಕೊರೊನಾ ಕೂಡ ತನ್ನ ರೂಪ ಬದಲಿಸಿದ ಹೊಸ ರೂಪದಲ್ಲಿ ಜನರ ಮುಂದೆ ಹೊಸ ಸವಾಲುಗಳನ್ನೇ ಸೃಷ್ಟಿಸುತ್ತಿದೆ. ಇವೆಲ್ಲವುಗಳ ನಡುವೆ ರಾಜ್ಯದಲ್ಲಿ ಹೊಸ ಚಿಂತಾಜನಕ ಸ್ಥಿತಿಯೊಂದು ಬೆಳಕಿಗೆ ಬಂದಿದೆ. ದಾವಣಗೆರೆ (Davanagere) ಜಿಲ್ಲೆಯಯಲ್ಲಿ 13 ವರ್ಷದ ಬಾಲಕನೋರ್ವನಲ್ಲಿ ಮೊದಲು ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಅದಾದ ಬಳಿಕ ಆತನ ಮೆದುಳು ನಿಷ್ಕ್ರೀಯಗೊಂಡಿದೆ. ಆಸ್ಪತ್ರೆಯಲ್ಲಿ ಆತನಿಗೆ ಹಲವು ದಿನಗಳ ಕಾಲ ವೆಂಟಿಲೆಟರ್ ಮೇಲೆ ಚಿಕಿತ್ಸೆ ನೀಡಲಾಗಿದೆ. ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. 


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣ ದಾವಣಗೆರೆ ಜಿಲ್ಲೆಯಿಂದ ವರದಿಯಾಗಿದ್ದು, ಕೊರೊನಾ (Covid-19) ಬಳಿಕ ಮೆದುಳು ನಿಷ್ಕ್ರೀಯಗೊಂಡ ರಾಜ್ಯದ ಮೊದಲ ಪ್ರಕರಣ ಇದಾಗಿದ್ದು, ದೇಶದ ಎರಡನೇ ಪ್ರಕರಣವಾಗಿದೆ.  ವರದಿಗಳ ಪ್ರಕಾರ, ಈ 13 ವರ್ಷದ ಮಗು ಅಕ್ಯೂಟ್ ನೆಫ್ರೋಟೈಸಿಂಗ್ ಎನ್ಸೇಫಿಲೋಪಥಿ ಆಫ್ ಚೈಲ್ಡ್ ಹುಡ್ (ANEC) ಬಳಲುತ್ತಿದ್ದು, ಕಳೆದ 8 ದಿನಗಳಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದನ್ನೂ ಓದಿ-K Sudhakar : ರಾಜ್ಯಕ್ಕೆ ಬರುವ ಮಹಾರಾಷ್ಟ್ರ-ಕೇರಳ ಪ್ರಯಾಣಿಕರಿಗೆ 'RTPCR' ರಿಪೋರ್ಟ್ ಕಡ್ಡಾಯ! 


ಈ ಕುರಿತು ಹೇಳಿಕೆ ನೀಡಿರುವ ಎಸ್. ಎಸ್. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಎನ್. ಎ. ಕಲ್ಲಪ್ಪನವರ್, ಮಗುವಿನ ಮೆದುಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ನಿಷ್ಕ್ರೀಯವಾಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. ಒಟ್ಟು ಮೂರು ದಿನಗಳ ಕಾಲ ಆತನನ್ನು ವೆಂಟಿಲೆಟರ್ ಮೇಲೆ ಇಡಲಾಗಿತ್ತು, ಬಳಿಕ ಆತನ ಆರೋಗ್ಯ ಚೇತರಿಸಿಕೊಂಡ ಬಳಿಕ ವೆಂಟಿಲೆಟರ್ ತೆಗೆದುಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-Delta Plus Variant ತಡೆಗಟ್ಟಲು ತಕ್ಷಣ ಕ್ರಮಕೈಗೊಳ್ಳಿ, ಕರ್ನಾಟಕಕ್ಕೆ ಕೇಂದ್ರ ಸೂಚನೆ


ಮಗುವಿಗೆ ಇನ್ನೂ ಒಂದು ವಾರದ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ. ಆತನು ಸಂಪೂರ್ಣ ಚೇತರಿಸಿಕೊಂಡ ಬಳಿಕ ಆತನ ಮೆದುಳು ಎಷ್ಟು ಪ್ರಮಾಣದಲ್ಲಿ ಪ್ರಭಾವಕ್ಕೆ ಒಳಗಾಗಿದೆ ಎಂಬುದನ್ನು ನಾವು ಪತ್ತೆಹಚ್ಚಬಹುದು. ಈ ಕಾಯಿಲೆಯ ಚಿಕಿತ್ಸೆ ತುಂಬಾ ದುಬಾರಿಯಾಗಿದೆ ಎಂದು ಅವರು ಹೇಳಿದ್ದಾರೆ. 30 ಕೆ.ಜಿ ತೂಕದ ಮಗುವಿಗೆ ಇದರ ಒಂದು ಇಂಜೆಕ್ಷನ್ 75000 ರಿಂದ 1 ಲಕ್ಷ ರೂ.ಗಳಿಗೆ ಸಿಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ-Karnataka Govt : ರಾಜ್ಯ ಸರ್ಕಾರದಿಂದ 'ಮದುವೆ ಸಮಾರಂಭ'ಗಳಿಗೆ ಷರತ್ತುಬದ್ಧ ಅನುಮತಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.