ನವದೆಹಲಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರ ಸಂವಿಧಾನ ಕುರಿತ ಹೇಳಿಕೆಗೆ ರಾಷ್ಟ್ರಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಈ ಕುರಿತಾಗಿ ಸಚಿವರನ್ನು ಕೂಡಲೇ ಸಂಪುಟದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದ್ದಾರೆ.



COMMERCIAL BREAK
SCROLL TO CONTINUE READING

ಈ ಕುರಿತಾಗಿ ಟ್ವೀಟ್ ಮಾಡಿರುವ ಅಂಕಣಕಾರ ಶೇಖರ್ ಗುಪ್ತಾ  ಬಿಜೆಪಿ ಸಚಿವ ಅನಂತಕುಮಾರ ಹೆಗಡೆಯವರ ಸಂವಿಧಾನವನ್ನು ಬದಲಿಸಬೇಕೆನ್ನುವ ನಿಲವು  ಹಿಂದುತ್ವದಲ್ಲಿ ಬೆರೆತುಕೊಂಡಿದೆ, ಆದ್ದರಿಂದ ಅವರು ಕೇವಲ ಆರ್ ಎಸ್ ಎಸ್ ಹೇಳಿದಂತೆ ಕೇಳುತ್ತಿದ್ದಾರೆ ಅಷ್ಟೇ , ಈ ಪ್ರಕ್ರಿಯೆ ಅದು ಗೊಲ್ವಾಲಕರ ಆದಿಯಾಗಿ ಬೆಳೆದುಬಂದಿದೆ ಎಂದು ಟ್ವೀಟ್ ಮೂಲಕ ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ.



ಅದೇ ರೀತಿಯಾಗಿ ಸಚಿವರ ಜ್ಯಾತ್ಯಾತೀತರ ಕುರಿತಾದ  ಹೇಳಿಕೆಯನ್ನು ಖಂಡಿಸಿರುವ ದಕ್ಷಿಣ ಭಾರತದ ಖ್ಯಾತ ನಟ   ಪ್ರಕಾಶ ರೈ  ಒಬ್ಬ ಚುನಾಯಿತ ವ್ಯಕ್ತಿಯಾಗಿ ನೀವು ಅಷ್ಟು ಕೀಳು ಮಟ್ಟಕ್ಕೆ ಹೇಗೆ ಇಳಿಯುತ್ತಿರಾ  ಅನಂತಕುಮಾರ್ ಹೆಗಡೆಯವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. 


"ಜಂಟಲ್ ಮೆನ್ 


*ಜ್ಯಾತ್ಯತೀತ ವ್ಯಕ್ತಿಗಳ ಪೋಷಕರ ರಕ್ತ ಸಂಬಂಧದ ಬಗ್ಗೆ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದಿರಿ.ಮಾನವನ  ರಕ್ತವು ಯಾವುದೇ ಜಾತಿ ಅಥವಾ ನಂಬಿಕೆಗಳನ್ನು  ನಿರ್ಧರಿಸುವುದಿಲ್ಲ 
*ಜ್ಯಾತ್ಯಾತೀತವಾಗಿರುವುದರೆಂದರೆ  ಯಾವುದೇ ಧರ್ಮ ಅಥವಾ ನಂಬಿಕೆಗಳ ಜೊತೆಗೆ ಗುರುತಿಸಿಕೊಲ್ಲುವುದಲ್ಲ 
*ಜ್ಯಾತ್ಯಾತೀತವಾಗಿರುವುದೆಂದರೆ  ಎಲ್ಲ ಧರ್ಮಗಳನ್ನು ಗೌರವಿಸುವುದು ಮತ್ತು ಸ್ವೀಕರಿಸುವುದು


ನೀವು ಯಾವಾಗ ಈ ರಕ್ತ ರಾಜಕಾರಣದ ಕೊಯ್ಲಿನಿಂದ ಎಚ್ಚರಗೊಳ್ಳುತ್ತಿರಾ ಎಂದು ರೈ ಯವರು ಹೆಗಡೆಯವರಲ್ಲಿ ಪ್ರಶ್ನಿಸಿದ್ದಾರೆ."



ಅದೇ ರೀತಿಯಾಗಿ  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹೆಗಡೆಯವರ ಹೇಳಿಕೆಗೆ ಪ್ರತಿಕ್ರಯಿಸಿ "ಹೆಗಡೆಯವರ ಹೇಳಿಕೆಗಳು ಸಮಾನತೆಯ ಸಮಾಜದ ದೃಷ್ಟಿಕೋನ ಹೊಂದಿದ್ದ ಅಂಬೇಡ್ಕರ್ ರವರಿಗೆ ಅವಮಾನಿಸಿವೆ ಅಲ್ಲದೆ  ಅವರು ಚುನಾವಣಾ ಪ್ರತಿನಿಧಿ ಮತ್ತು ಮಂತ್ರಿಯಾಗಿರಲು ಯೋಗ್ಯರಲ್ಲ" ಎಂದು ಹೇಳಿದ್ದಾರೆ.


ಇತ್ತೀಚಿಗೆ ಅನಂತ ಕುಮಾರ ಹೆಗಡೆ ಕೊಪ್ಪಳದಲ್ಲಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮದಲ್ಲಿ ಸಂವಿಧಾನ ಮತ್ತು ಜ್ಯಾತ್ಯತೀತ ವ್ಯಕ್ತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಈಗ ದೇಶದಲ್ಲೆಡೆಯಿಂದ ಪ್ರತಿರೋಧ ವ್ಯಕ್ತವಾಗಿದೆ.