Anil Deshmukh In ED Custody: ನವೆಂಬರ್ 6ರವರೆಗೆ ED ವಶಕ್ಕೆ Anil Deshmukh
Anil Deshmukh In ED Custody: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ನ್ಯಾಯಾಲಯ ನವೆಂಬರ್ 6 ರವರೆಗೆ ಇಡಿ ಒಪ್ಪಿಸಿ ಆದೇಶ ಹೊರಡಿಸಿದೆ.
Anil Deshmukh In ED Custody: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ (Maharashtra Former Home Minister Anil Deshmukh) ದೇಶಮುಖ್ ಅವರನ್ನು PMLA ನ್ಯಾಯಾಲಯ ನವೆಂಬರ್ 6 ರವರೆಗೆ ಇಡಿ ED ವಶಕ್ಕೆ ಒಪ್ಪಿಸಿದೆ. ಜಾರಿ ನಿರ್ದೇಶನಾಲಯ (Enforcement Directorate) ಮಧ್ಯಾಹ್ನ ದೇಶಮುಖ್ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿಬಿ ಜಾಧವ್ (PB Jadhav) ಅವರ ಮುಂದೆ ಹಾಜರುಪಡಿಸಿತ್ತು ಮತ್ತು ವಿಚಾರಣೆಗಾಗಿ ದೇಶಮುಖ್ ಅವರ ಕಸ್ಟಡಿಯನ್ನು ಕೋರಿತ್ತು. ಇದಾದ ಬಳಿಕ ನ್ಯಾಯಾಲಯ ಅವರನ್ನು ED ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
Afghanistan Blast: ಕಾಬೂಲ್ ಮಿಲಿಟರಿ ಆಸ್ಪತ್ರೆಯ ಬಳಿ ಸ್ಫೋಟ, 19 ಸಾವು 50 ಜನರಿಗೆ ಗಾಯ
ಇಡಿ ಪ್ರಕಾರ, ರಾಜ್ಯ ಗೃಹ ಸಚಿವರಾಗಿದ್ದಾಗ ದೇಶಮುಖ್ (Anil Deshmukh) ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೂಲಕ ಮುಂಬೈನ ವಿವಿಧ 'ಬಾರ್' ಮತ್ತು ರೆಸ್ಟೋರೆಂಟ್‌ಗಳಿಂದ 4.70 ಕೋಟಿ ರೂ. ಹಫ್ತಾ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ-Maharashtra IT Raid: ಅನೀಲ್ ದೇಶ್ಮುಖ್ ಬಳಿಕ ಅಜಿತ್ ಪವಾರ್ ಮೇಲೆ IT ಇಲಾಖೆಯ ಮಹಾ ಆಕ್ಷನ್
ದೇಶಮುಖ್ ಅವರ ಕುಟುಂಬದ ನಿಯಂತ್ರಣದಲ್ಲಿರುವ ನಾಗ್ಪುರದ ಶೈಕ್ಷಣಿಕ ಟ್ರಸ್ಟ್ 'ಶ್ರೀ ಸಾಯಿ ಶಿಕ್ಷಣ ಸಂಸ್ಥಾನ'ದಲ್ಲಿ ಹಣವನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ದೇಶಮುಖ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದ್ದು, ಏಜೆನ್ಸಿಯ ಸಂಪೂರ್ಣ ಪ್ರಕರಣವು ಕಳಂಕಿತ ಪೋಲೀಸ್ (Sachin Vaze) ನೀಡಿದ ದುರುದ್ದೇಶಪೂರಿತ ಹೇಳಿಕೆಗಳನ್ನು ಆಧರಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ-ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ, ಸಿದ್ದರಾಮಯ್ಯ ನಿವಾಸದಲ್ಲಿ ಕಾರ್ಯಕರ್ತರ ಸಂಭ್ರಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.