ಸಮಸ್ತಿಪುರ್: ಸಾಮಾನ್ಯವಾಗಿ ಎಲ್ಲರೂ ತಮ್ಮ ಮಕ್ಕಳು, ಪ್ರೀತಿಪಾತ್ರರು, ಕೆಲವೊಮ್ಮೆ ಮನೆಯಲ್ಲಿ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಆದರೆ ಇಂದು ನಾವು ನಿಮಗೆ ವಿಶೇಷ ವ್ಯಕ್ತಿಯ ಬಗ್ಗೆ ತಿಳಿಸುತ್ತಿದ್ದೇವೆ, ಈತನ ಪ್ರಾಣಿ ಪ್ರೇಮವನ್ನು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. 


COMMERCIAL BREAK
SCROLL TO CONTINUE READING

ಹೌದು, ಬಿಹಾರದ ಸಮಸ್ತಿಪುರ್ ನಲ್ಲಿರುವ ಪ್ರಾಣಿ ಪ್ರೇಮಿಯ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ. ಈ ಪ್ರಾಣಿ ಪ್ರೇಮಿ ರಾಣಿ ಎಂಬ ಒಂದು ಆನೆಯ ಹುಟ್ಟುಹಬ್ಬವನ್ನು ಬಹಳ ವೈಭವದಿಂದ ಆಚರಿಸಿದ್ದಾರೆ. ಈ ಕಾರ್ಯದಲ್ಲಿ, ಬಿಹಾರದ ಅಸೆಂಬ್ಲಿ ಸ್ಪೀಕರ್ ವಿಜಯ್ ಕುಮಾರ್ ಚೌಧರಿ ಕೂಡಾ ಭಾಗಿಯಾಗಿದ್ದು ಆತನ ಪ್ರಾಣಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಮಸ್ತಿಪುರದ ಪ್ರಾಣಿ ಪ್ರೇಮಿ ಮಹೇಂದ್ರ ಪ್ರಧಾನ್, ಕೆಲವು ವರ್ಷಗಳ ಹಿಂದೆ ಮಾಲಾ ಎಂಬ ಆನೆಯನ್ನು ಖರೀದಿಸಿದರು. ಮಾಲಾ ಎಂಬ ಆನೆ ಗರ್ಭವತಿಯಾಗಿ ಕೆಲವು ತಿಂಗಳ ನಂತರ ಒಂದು ಆನೆಗೆ ಜನ್ಮ ನೀಡಿತು. ಮಹೇಂದ್ರ ಪ್ರಧಾನ್ ಆ ಆನೆಗೆ 'ರಾಣಿ' ಎಂದು ಹೆಸರಿಟ್ಟರು. ರಾಣಿ ಹುಟ್ಟಿದ ಆರು ತಿಂಗಳ ನಂತರ, ತಾಯಿ(ಮಾಲಾ) ನಿಧನರಾದರು.


ರಾಣಿಯನ್ನು ಮಹೇಂದ್ರ ಪ್ರಧಾನ್ ತನ್ನ ಮಕ್ಕಳಂತೆಯೇ ಬೆಳೆಸಿದರು. ಈಗ ರಾಣಿಗೆ ಎಂಟು ವರ್ಷ ವಯಸ್ಸು. ಮಹೇಂದ್ರ ಪ್ರಧಾನ್ ರಾಣಿಯ ಎಂಟನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಗಾನ-ಬಜಾನದೊಂದಿಗೆ ಆಚರಣೆಗೊಂಡ ರಾಣಿಯ ಬರ್ತ್ ಡೇ ಪಾರ್ಟಿಗೆ ಒಂಟೆಗಳು ಮತ್ತು ಕುದುರೆಗಳನ್ನು ಕರೆಯಲಾಯಿತು. ಅದೇ ಸಮಯದಲ್ಲಿ, ಬಿಹಾರದ ಅಸೆಂಬ್ಲಿ ಸ್ಪೀಕರ್ ವಿಜಯ್ ಕುಮಾರ್ ಚೌಧರಿ ಅವರೊಂದಿಗೆ ಸಾವಿರಾರು ಜನರು ಈ ಅನನ್ಯ ಪ್ರಾಣಿ ಪ್ರೀತಿಯನ್ನು ಕಂಡರು.



ರಾಣಿಯ ಹುಟ್ಟುಹಬ್ಬದಲ್ಲಿ ಭಾಗಿಯಾದ ಜನರೆಲ್ಲರೂ ಆಶ್ಚರ್ಯಚಕಿತರಾಗುವುದರ ಜೊತೆಗೆ ಪ್ರತಿಯೊಬ್ಬರೂ ಮಹೇಂದ್ರ ಪ್ರಧಾನ್ ಅವರ ಈ ಪ್ರಾಣಿ ಪ್ರೀತಿಯನ್ನು ಮೆಚ್ಚಿದರು. ಪ್ರಾಣಿಗಳಿಗೂ ಈ ರೀತಿ ಪ್ರೀತಿ, ಸಂವೇದನೆ ನೀಡುವ ಜನರನ್ನು ಇದುವರೆಗೂ ನೋಡಿಲ್ಲ ಎಂದು ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಬಹಳ ಪ್ರಶಂಸನೀಯವಾಗಿದ್ದು, ಇಂತಹವರನ್ನು ನೋಡಿ ಹಲವರಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟರು.


ಮಹೇಂದ್ರ ಪ್ರಧಾನ್ ನ ಈ ಪ್ರಾಣಿ ಪ್ರೀತಿಯ ಸಮಾಜಕ್ಕೆ ಒಂದು ಉದಾಹರಣೆಯಾಗಿದೆ, ಇದು ಪ್ರಾಣಿಗಳಿಗೂ ಸಮಾಜದಲ್ಲಿ ಪ್ರೀತಿಯನ್ನು ಹಂಚಲು ಪ್ರೇರೇಪಿಸುತ್ತದೆ.