ಬಿಹಾರ: ಲಾಲು ಯಾದವ್ ಬೇನಾಮಿ ಆಸ್ತಿ ಮುಟ್ಟುಗೋಲು!
ಒಂದು ಸಾವಿರ ಕೋಟಿ ರೂ. ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯನ್ನು, ಪ್ಲಾಟನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪಾಟ್ನಾ: ಮೇವು ಹಗರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಬೆನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದಾಯ ತೆರಿಗೆ ಇಲಾಖೆಯ ಮೊದಲ ಮೇಲ್ಮನವಿ ಪ್ರಾಧಿಕಾರವು ಅದರ ಮೇಲೆ ಅಂತಿಮ ಮುದ್ರೆ ಹಾಕಿದೆ. ಈಗ ಬಂಗಲೆಯಲ್ಲಿ ತೆರೆಯಲಾದ ಅನೇಕ ಖಾತೆಗಳನ್ನು ಮತ್ತು ಪಾಟ್ನಾ ವಿಮಾನ ನಿಲ್ದಾಣದ ಸಮೀಪವಿರುವ ಅವಾಮಿ ಬ್ಯಾಂಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಪಾಟ್ನಾ ವಿಮಾನ ನಿಲ್ದಾಣದ ಸಮೀಪವಿರುವ ಬಂಗಲೇ ಮತ್ತು ಅವಾಮಿ ಬ್ಯಾಂಕಿನಲ್ಲಿ ನೋಟು ಅಮಾನಿಕರಣದ ಸಮಯದಲ್ಲಿ ತೆರೆಯಲಾಗಿದ್ದ ಹಲವಾರು ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಮಾನ ನಿಲ್ದಾಣದ ಸಮೀಪ ಫೇರ್ ಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಿನಿಂದ ರೂ. 33 ಕೋಟಿ ಮೌಲ್ಯದ ಬಂಗಲೆ ಹೊಂದಿದ್ದರು. ತೇಜ್ ಪ್ರತಾಪ್ ಯಾದವ್, ತೇಜಶ್ವಿ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಕಂಪನಿಯ ನಿರ್ದೇಶಕ ಹುದ್ದೆಯಲ್ಲಿದ್ದರು. ಇವರೆಲ್ಲರೂ ಕಂಪನಿಯ ನಿರ್ದೇಶನಾಲಯದಲ್ಲಿ 2014 ರಿಂದ 2017 ರವರೆಗೆ ಇದ್ದರು. ಇದು ಮಾತ್ರವಲ್ಲ, ಈ ಕಂಪನಿ ನಕಲಿಯಾಗಿತ್ತು.
ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ಇದನ್ನು ವಶಪಡಿಸಿಕೊಂಡಿತು. ಅದೇ ಸಮಯದಲ್ಲಿ, ನೋಟು ರದ್ದತಿ ಸಮಯದಲ್ಲಿ ಹಲವರ ಹೆಸರಿನಲ್ಲಿ ಅನೇಕ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದು ಠೇವಣಿ ಇರಿಸಲಾಗಿತ್ತು.
ಲಾಲು ಪ್ರಸಾದ್ ಅವರ ಬಿನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗೆಗಿನ ಆದಾಯ ತೆರಿಗೆ ಇಲಾಖೆಯ ನಿರ್ಧಾರದ ಕುರಿತು ಸಾರಿಗೆ ಸಚಿವ ಮತ್ತು ಬಿಜೆಪಿ ಮುಖಂಡ ನಂದ್ ಕಿಶೋರ್ ಯಾದವ್ ಇದು ಕಾನೂನು ಪ್ರಕ್ರಿಯೆ ಎಂದು ಹೇಳಿದ್ದಾರೆ.