ನವದೆಹಲಿ: ಭಾರತೀಯ ರೈಲ್ವೆ ಹೊಸ ವರ್ಷದಲ್ಲಿ ಯುವ ಜನತೆಗೆ ಬಂಪರ್ ಉಡುಗೊರೆ ನೀಡಿದೆ. ಕಿರಿಯ ಎಂಜಿನಿಯರ್ ಹುದ್ದೆಗಳಿಗಾಗಿ ಭಾರತೀಯ ರೈಲ್ವೇಯಿಂದ 13000 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಿರಿಯ ಎಂಜಿನಿಯರ್ ನ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣ ಆನ್ಲೈನ್ ಪ್ರಕ್ರಿಯೆ ಆಗಿರುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಯುವಜನರಿಗೆ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗಾಗಿ ಭಾರತೀಯ ರೈಲ್ವೆಗಳು 13,487 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ರೈಲ್ವೆ ಜೂನಿಯರ್ ಎಂಜಿನಿಯರ್ ಹುದ್ದೆಗಾಗಿ ಅರ್ಜಿ ಸಲ್ಲಿಸಲು ಜನವರಿ 31, 2019 ಕೊನೆಯ ದಿನಾಂಕವಾಗಿರುತ್ತದೆ. 


ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ, ಅರ್ಜಿದಾರರು ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಕಿರಿಯ ಎಂಜಿನಿಯರ್ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿರುತ್ತದೆ.


ಯಾವ ಹುದ್ದೆಗೆ ಎಷ್ಟು ಸ್ಥಾನ ಖಾಲಿ ಇದೆ?


ಜೂನಿಯರ್ ಇಂಜಿನಿಯರ್- 12844


ಜೂನಿಯರ್ ಎಂಜಿನಿಯರ್ (ಮಾಹಿತಿ ತಂತ್ರಜ್ಞಾನ) - 29


ಡಿಪೋ ಮೆಟೀರಿಯಲ್ ಸಪ್ಲಿಮೆಂಟ್ - 227


ರಾಸಾಯನಿಕ ಮತ್ತು ಮೆಟಲರ್ಜಿಕಲ್ ಸಹಾಯಕ- 387


  • ಆನ್ಲೈನ್ ನೋಂದಣಿ ತೆರೆಯುವ ದಿನಾಂಕ- 2 ಜನವರಿ 2019 ಬೆಳಿಗ್ಗೆ 10 ಗಂಟೆಯಿಂದ

  • ಆನ್ಲೈನ್ ನೋಂದಣಿಯ ಕೊನೆಯ ದಿನಾಂಕ - 31 ಜನವರಿ 2019 ರಾತ್ರಿ 11:59 ಕ್ಕೆ

  • ಆಫ್ಲೈನ್ ಪಾವತಿ ಮುಕ್ತಾಯದ ದಿನಾಂಕ- ಫೆಬ್ರವರಿ 4, 2019ರ ಮಧ್ಯಾಹ್ನ ಒಂದು ಗಂಟೆಯೊಳಗೆ 

  • ಆನ್ಲೈನ್ ಪಾವತಿ ಮುಕ್ತಾಯ ದಿನಾಂಕ- ಫೆಬ್ರವರಿ 5, 2019 ರಂದು ರಾತ್ರಿ 10 ಗಂಟೆ

  • ಆನ್ಲೈನ್ನಲ್ಲಿ ಅರ್ಜಿಯ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನಾಂಕ- 2019ರ ಫೆಬ್ರವರಿ 7, ರಾತ್ರಿ 11:59ರವರೆಗೆ


ಮೊದಲ ಹಂತ: 2019 ರ ಏಪ್ರಿಲ್ / ಮೇ ನಲ್ಲಿ ನಡೆಯುವ ಕಂಪ್ಯೂಟರ್ ಆಧಾರಿತ ಪರೀಕ್ಷೆ


ಗರಿಷ್ಠ ವಯೋಮಿತಿ : 33 ವರ್ಷ


ಹೆಚ್ಚಿನ ಮಾಹಿತಿಗಾಗಿ, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://t.co/moGob8NwGM
https://t.co/AtG9jk2srA