Shraddha Walkar New Chat Viral:“ಹಾಸಿಗೆಯಿಂದ ಏಳಲಾಗುತ್ತಿಲ್ಲ”: ಅಫ್ತಾಬ್ ಕ್ರೌರ್ಯದ ಸತ್ಯ ಬಯಲಿಗೆ.. ಶ್ರದ್ಧಾ ಮೆಸೇಜ್ ಓದಿ
Shraddha Walkar New Chat Viral: ಶ್ರದ್ಧಾ 24 ನವೆಂಬರ್ 2020 ರಂದು ಸ್ನೇಹಿತನೊಂದಿಗೆ ಚಾಟ್ ಮಾಡಿದ್ದರು. ಶ್ರದ್ಧಾ ಅವರ ಅಸಹಾಯಕತೆ ಮತ್ತು ಹತಾಶೆ ಈ ಚಾಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಫ್ತಾಬ್ ಶೀಘ್ರದಲ್ಲೇ ತನ್ನ ಮನೆಯಿಂದ ಹೊರಹೋಗುವುದಾಗಿ ಶ್ರದ್ಧಾ ತನ್ನ ಸ್ನೇಹಿತನಿಗೆ ಚಾಟ್‌ನಲ್ಲಿ ಹೇಳಿದ್ದಳು. ಈ ಚಾಟ್‌ನಲ್ಲಿ ಶ್ರದ್ಧಾ ಅವರು ಅಫ್ತಾಬ್‌ನ ಕ್ರೌರ್ಯವನ್ನು ವಿವರಿಸಿದ್ದಾರೆ.
Shraddha Walkar New Chat Viral: ಶ್ರದ್ಧಾಳನ್ನು ಅಮಾನುಷವಾಗಿ ಹತ್ಯೆಗೈದ ಆಕೆ ಬಾಯ್ ಫ್ರೆಂಡ್ ನಂತರ ಆಕೆಯ ಮೃತ ದೇಹವನ್ನು 35 ಪೀಸ್ ಮಾಡಿ ಕ್ರೌರ್ಯ ಎಸಗಿರುವ ಘಟನೆ ದೇಶದಲ್ಲಿಯೇ ಸಂಚಲನ ಮೂಡಿಸಿದೆ. ಶ್ರದ್ಧಾ ಕೊಲೆ ಆರೋಪಿ ಮತ್ತು ಆಕೆಯ ಲಿವ್ ಇನ್ ಪಾರ್ಟ್ ನರ್ ಅಫ್ತಾಬ್‌ನ ನೈಜತೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇದೀಗ ಈ ಭೀಕರ ಕೊಲೆ ಪ್ರಕರಣದಲ್ಲಿ ಹೊಸದೊಂದು ವಿಚಾರ ಬಹಿರಂಗವಾಗಿದೆ. ಶ್ರದ್ಧಾ ಅವರ ಮತ್ತೊಂದು ಚಾಟ್ ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಅವರು ಅಫ್ತಾಬ್‌ನ ಅವಸ್ಥೆಯನ್ನು ಸ್ನೇಹಿತರಿಗೆ ವಿವರಿಸಿದ್ದಾಳೆ ಶ್ರದ್ಧಾ.
ಇದನ್ನೂ ಓದಿ: Shraddha Murder Case: ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ, ಗಲ್ಲು ಶಿಕ್ಷೆಗೆ ವಕೀಲರ ಆಗ್ರಹ
ಶ್ರದ್ಧಾ 24 ನವೆಂಬರ್ 2020 ರಂದು ಸ್ನೇಹಿತನೊಂದಿಗೆ ಚಾಟ್ ಮಾಡಿದ್ದರು. ಶ್ರದ್ಧಾ ಅವರ ಅಸಹಾಯಕತೆ ಮತ್ತು ಹತಾಶೆ ಈ ಚಾಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಫ್ತಾಬ್ ಶೀಘ್ರದಲ್ಲೇ ತನ್ನ ಮನೆಯಿಂದ ಹೊರಹೋಗುವುದಾಗಿ ಶ್ರದ್ಧಾ ತನ್ನ ಸ್ನೇಹಿತನಿಗೆ ಚಾಟ್‌ನಲ್ಲಿ ಹೇಳಿದ್ದಳು. ಈ ಚಾಟ್‌ನಲ್ಲಿ ಶ್ರದ್ಧಾ ಅವರು ಅಫ್ತಾಬ್‌ನ ಕ್ರೌರ್ಯವನ್ನು ವಿವರಿಸಿದ್ದಾರೆ.
ಈ ವಾಟ್ಸ್ ಆಪ್ ಚಾಟ್ ನಲ್ಲಿ ಅಫ್ತಾಬ್ ನನಗೆ ಹೊಡೆದಿದ್ದು, ಹಾಸಿಗೆಯಿಂದ ಏಳಲು ಸಾಧ್ಯವಾಗದಷ್ಟು ಹೊಡೆದಿದ್ದಾನೆ ಎಂದು ಹೇಳಿದ್ದಾಳೆ.
ಚಾಟ್ ನಲ್ಲಿ ಏನಿದೆ:
“ನಿನ್ನೆ ಪೋಷಕರು ಮನೆಗೆ ಹೋದ ನಂತರ ಎಲ್ಲವೂ ಸರಿಯಾಗಿದೆ. ಇಂದು ಅವನು ಹೊರಡುತ್ತಿದ್ದಾನೆ. ಆದರೆ ನಾನು ಇಂದು ಹೋಗುತ್ತಿಲ್ಲ. ಏಕೆಂದರೆ ಅವನು ನನ್ನನ್ನು ನಿರ್ದಯವಾಗಿ ಹೊಡೆದಿದ್ದಾನೆ. ನನ್ನ ರಕ್ತದೊತ್ತಡ ಕಡಿಮೆಯಾಗಿದೆ. ನನ್ನ ದೇಹದ ಮೇಲೆ ಗಾಯದ ಗುರುತುಗಳಿವೆ. ಹಾಸಿಗೆಯಿಂದ ಎದ್ದೇಳುವಷ್ಟು ಶಕ್ತಿ ದೇಹದಲ್ಲಿ ಇಲ್ಲ. ಅವನು ಇಲ್ಲಿಂದ ಹೋಗಬೇಕೆಂದು ನಾನು ಬಯಸುತ್ತೇನೆ. ನನ್ನಿಂದ ಉಂಟಾದ ಯಾವುದೇ ಸಮಸ್ಯೆಗೆ ಮತ್ತು ಕೆಲಸದ ಮೇಲೆ ಪರಿಣಾಮ ಬೀರಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಬರೆದುಕೊಂಡಿದ್ದಾಳೆ.
ಎಫ್‌ಎಸ್‌ಎಲ್ ತನಿಖೆ ಆರಂಭ?
ದೆಹಲಿ ಪೊಲೀಸರು ಇನ್ನೂ ಪತ್ತೆಯಾದ ಮೂಳೆಗಳು ಮತ್ತು ಮೃತದೇಹದ ತುಂಡುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಲ್ಲ. ಎಫ್‌ಎಸ್‌ಎಲ್ ಅಧಿಕಾರಿಗಳ ಪ್ರಕಾರ, ಅಫ್ತಾಬ್‌ನ ರಿಮಾಂಡ್ ಮುಗಿದ ನಂತರ ತನಿಖಾಧಿಕಾರಿಗಳು ಈ ವಿಷಯಗಳನ್ನು ಎಫ್‌ಎಸ್‌ಎಲ್ ಕಚೇರಿಯಲ್ಲಿ ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸುತ್ತಾರೆ. ಅದರ ನಂತರವೇ ಎಫ್‌ಎಸ್‌ಎಲ್ ತನ್ನ ತನಿಖೆಯನ್ನು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡು ಮಾಡ್ಬೇಕು: ರಾಮ್ ಗೋಪಾಲ್ ವರ್ಮಾ
ಮೂಲಗಳ ಪ್ರಕಾರ, ಎಫ್‌ಎಸ್‌ಎಲ್ ರೋಹಿಣಿ ಕೂಡ ಈಗ ನಾರ್ಕೋ ಪರೀಕ್ಷೆ ನಡೆಸುವ ಸೌಲಭ್ಯವನ್ನು ಹೊಂದಿದೆ. ಆದರೆ ಇದುವರೆಗೂ ಅಫ್ತಾಬ್ ನ ನಾರ್ಕೋ ಮಾಡಲು ಪೊಲೀಸರು ಆತನನ್ನು ಸಂಪರ್ಕಿಸಿಲ್ಲ. ನಾರ್ಕೋ ಪರೀಕ್ಷೆ ನಡೆಸಲು ಸುಮಾರು 3 ವಾರಗಳು ಬೇಕಾಗುವುದರಿಂದ, ರಿಮಾಂಡ್ ಮುಗಿದ ನಂತರ, ಅಫ್ತಾಬ್‌ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು. ನಂತರ ಅವರ ನಾರ್ಕೋ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಎಫ್‌ಎಸ್‌ಎಲ್ ಅಧಿಕಾರಿಗಳು ಯೋಚಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.