Chandrababu Naidu arrested : ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಇಂದು (ಸೆ.9) ಮುಂಜಾನೆ ಸಿಐಡಿ ಪೊಲೀಸರು ಬಂಧಿಸಿದ್ದಾರೆ. 'ಬಾಬು ಶ್ಯೂರಿಟಿ-ಭವಿಷ್ಯಕ್ಕೆ ಗ್ಯಾರಂಟಿ' ಎಂಬ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ರಾತ್ರಿ ನಂದ್ಯಾಲದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚಂದ್ರಬಾಬು ಭಾಗವಹಿಸಿದ್ದರು. ಬಳಿಕ ಆರ್.ಕೆ ಫಂಕ್ಷನ್ ಹಾಲ್‌ನಲ್ಲಿ ತಂಗಿದ್ದರು, ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಅವರನ್ನು ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

ಮಧ್ಯರಾತ್ರಿ 12 ಗಂಟೆಯ ನಂತರ 600ಕ್ಕೂ ಹೆಚ್ಚು ಪೊಲೀಸರು ನಂದ್ಯಾಲ ತಲುಪಿದರು. ಪ್ರತಿ ಹಂತದಲ್ಲೂ ಚೆಕ್‌ಪೋಸ್ಟ್ ಮತ್ತು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ. ಎಸ್ಪಿ ರಘುವೀರ್ ರೆಡ್ಡಿ ನೇತೃತ್ವದಲ್ಲಿ ನೂರಾರು ಪೊಲೀಸರು ಚಂದ್ರಬಾಬು ನಾಯ್ಡು ತಂಗಿದ್ದ ಆರ್ ಕೆ ಫಂಕ್ಷನ್ ಹಾಲ್ ಸುತ್ತುವರಿದಿದ್ದರು. 


ಇದನ್ನೂ ಓದಿ: ಜಿ20 ಔತಣಕೂಟಕ್ಕೆ ಖರ್ಗೆಗಿಲ್ಲ ಆಹ್ವಾನ, ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ


ನಂತರ ಡಿಐಜಿ ರಘುರಾಮಿ ರೆಡ್ಡಿ ಮತ್ತು ಎಸ್ಪಿ ರಘುವೀರರೆಡ್ಡಿ ಸ್ಥಳಕ್ಕೆ ಆಗಮಿಸಿದರು. ಇದೆ ವೇಳೆ ಚಂದ್ರಬಾಬು ಅವರನ್ನು ಬಂಧಿಸಲಾಗುವುದು ಎಂಬ ಮಾಹಿತಿ ಪಡೆದ ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಆರ್‌ಕೆ ಫಂಕ್ಷನ್ ಹಾಲ್‌ಗೆ ತಲುಪಿದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಂದ್ರಬಾಬು ತಂಗಿದ್ದ ಕ್ಯಾರಿವ್ಯಾನ್‌ಗೆ ಪೊಲೀಸರು ತೆರಳಿ ಬಂದಿಸಿದ್ದರು.


2014-2019ರ ತೆಲುಗು ದೇಶಂ ಸರ್ಕಾರದ ಅವಧಿಯಲ್ಲಿ ಎಪಿ ಸ್ಕಿಲ್ ಡೆವಲಪ್‌ಮೆಂಟ್ ಟ್ರೈನಿಂಗ್ ಹೆಸರಿನಲ್ಲಿ ಹಗರಣ ನಡೆದಿದೆ ಎಂಬುದು ಪ್ರಮುಖ ಆರೋಪ. ಎಪಿ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡುವ ಭಾಗವಾಗಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರಕರಣ ದಾಖಲಾಗಿತ್ತು.


ಇದನ್ನೂ ಓದಿ: G-20 Summit : ಅನಾರೋಗ್ಯದ ಹಿನ್ನೆಲೆ ಔತಣಕೂಟಕ್ಕೆ ಮಾಜಿ ಪ್ರದಾನಿ ಹೆಚ್‌ಡಿಡಿ ಗೈರು


ಅಂದಿನ ಟಿಡಿಪಿ ಸರ್ಕಾರ ಜರ್ಮನಿಯ ಸೀಮೆನ್ ಜತೆ 3,350 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿತ್ತು. ಸುಮಾರು 240 ಕೋಟಿಯನ್ನು ರಾಜ್ಯ ಸರ್ಕಾರ ಬೇರೆಡೆಗೆ ತಿರುಗಿಸಿದೆ ಎಂಬ ಆರೋಪಗಳಿವೆ. ಜತೆಗೆ ಜಿಎಸ್‌ಟಿಯಲ್ಲೂ ನಕಲಿ ಬಿಲ್‌ಗಳಿಂದ ವಂಚಿಸಲಾಗಿದೆ ಎಂಬ ಮತ್ತೊಂದು ಆರೋಪವಿದೆ. ಈ ಪ್ರಕರಣದಲ್ಲಿ ಇಡಿ ಈಗಾಗಲೇ 26 ಮಂದಿಗೆ ನೋಟಿಸ್ ಜಾರಿ ಮಾಡಿದೆ. 


ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಇಂದು ಬೆಳಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಅವರನ್ನು ಎಪಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. 120 (ಬಿ) 166, 167, 418,420, 465,468, 471, 409, 201, 109 ಅನ್ನು 34, 37 IPC ಮತ್ತು 1988 ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳು 12, 13 (2) ಜೊತೆಗೆ ಓದಲಾಗಿದೆ (13 (1) ) ಪ್ರಕರಣ ದಾಖಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.