ಉದ್ಯೋಗಿನಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
2020-21ನೇ ಸಾಲಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ 18 ವರ್ಷದಿಂದ 55 ವರ್ಷದೊಳಗೆ ವಯೋಮಿತಿ ಇರುವ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು: 2020-21ನೇ ಸಾಲಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ 18 ವರ್ಷದಿಂದ 55 ವರ್ಷದೊಳಗೆ ವಯೋಮಿತಿ ಇರುವ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವ ಉದ್ಯೋಗ ಕೈಗೊಳ್ಳಲು 3 ಲಕ್ಷಗಳ ವರೆಗೆ ಬ್ಯಾಂಕ್ ಸಾಲ ಮತ್ತು ನಿಗಮದಿಂದ ಎಸ್.ಸಿ,ಎಸ್.ಟಿ ಮಹಿಳೆಯರಿಗೆ ಶೇಕಡ 50%ರಷ್ಟು ಹಾಗೂ ಸಾಮಾನ್ಯ ವರ್ಗದ (ವಿಧವೆಯರು,ಸಂಕಷ್ಟಕ್ಕೊಳಗಾದಮಹಿಳೆಯರು,ಅಂಗವಿಕಲರು), ಮಹಿಳೆಯರಿಗೆ ಶೇಕಡ 30%ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.
Bank Recruitment 2020: ಕೇವಲ ಸಂದರ್ಶನದ ಮೂಲಕ ಈ ಬ್ಯಾಂಕ್ ನಲ್ಲಿ ನೌಕರಿ ಪಡೆಯಲು ಇಂದೇ ಅಪ್ಪ್ಲೈ ಮಾಡಿ
ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂರ್ಪಕಿಸಿ ಅರ್ಜಿ ಪಡೆದು ಅಕ್ಟೋಬರ್ 01 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 23 ಕೊನೆಯ ದಿನಾಂಕವಾಗಿರುತ್ತದೆ.
ನಿಮ್ಮ ಭಾಗ್ಯದಲ್ಲಿ Government Job ಇದೆಯೋ ಅಥವಾ ಇಲ್ಲವೋ ಹೀಗೆ ತಿಳಿಯಿರಿ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಕಛೇರಿಯನ್ನು ಸಂರ್ಪಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.