PM Awas Yojana : ಪಿಎಂ ಅವಾಜ್ ಯೋಜನೆ ಅಡಿಯಲ್ಲಿ 16,488 ಮನೆ ನಿರ್ಮಾಣಕ್ಕೆ ಅನುಮೋದನೆ, ಈ ಕೂಡಲೇ ಅರ್ಜಿ ಸಲ್ಲಿಸಿ
ಈ ಹಿಂದೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಪ್ರಯೋಜನವು ಬಡ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಗೃಹ ಸಾಲದ ಮೊತ್ತವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರಿಗೂ ಅದರ ಲಾಭವನ್ನು ನೀಡಲಾಗುತ್ತಿದೆ.
ನವದೆಹಲಿ : ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-U) ಅಡಿಯಲ್ಲಿ, ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ 16,488 ಮನೆಗಳ ನಿರ್ಮಾಣದ ಪ್ರಸ್ತಾಪಕ್ಕೆ ಹಸಿರು ನಿಶಾನೆ ತೋರಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (PM Awas Yojana), ಕೇಂದ್ರ ಸರ್ಕಾರವು ಮನೆಯಿಲ್ಲದವರಿಗೆ ಈ ಮೂಲಕ ಮನೆಗಳನ್ನು ನಿರ್ಮಿಸಿ ಕೊಡುತ್ತಿದೆ. ಈ ಯೋಜನೆಯಲ್ಲಿ, ಸಾಲದ ಮೇಲೆ ಮನೆ ಅಥವಾ ಫ್ಲಾಟ್ ಖರೀದಿಸುವ ಜನರಿಗೆ ಸಬ್ಸಿಡಿ ಸಹ ನೀಡಲಾಗುತ್ತದೆ. ಈ ನಿರ್ಧಾರವನ್ನು ಸರ್ಕಾರದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ 54 ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಭೆಯಲ್ಲಿ ಭಾಗವಹಿಸಿದ್ದವು.
PMAY ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
1. ಪ್ರಧಾನಮಂತ್ರಿ ಆವಾಸ್ ಯೋಜನೆಗೆ (PM Awas Yojana) ಅರ್ಜಿ ಸಲ್ಲಿಸಲು, ನಿಮ್ಮ ಮೊಬೈಲ್‌ನಿಂದ ಸರ್ಕಾರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಲಾಗಿನ್ ಐಡಿಯನ್ನು ರಚಿಸಬಹುದು.
2. ಈಗ ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆಗೆ (Mobile number) ಒಂದು ಬಾರಿ ಪಾಸ್ವರ್ಡ್ ಕಳುಹಿಸುತ್ತದೆ.
3. ಇದರ ಸಹಾಯದಿಂದ ಲಾಗಿನ್ ಆದ ನಂತರ, ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
4. PMAY G ಅಡಿಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.
5. ಇದರ ನಂತರ ಫಲಾನುಭವಿಗಳ ಅಂತಿಮ ಪಟ್ಟಿಯನ್ನು PMAYG ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ : ವೇತನ ಹೆಚ್ಚಳದ ಖುಷಿ ಮೇಲೆ ಗ್ರಹಣ, ನಿಯಮ ಬದಲಾವಣೆ ನಂತರ ಸ್ಯಾಲರಿ ಸ್ಲಿಪ್ ನಲ್ಲಿ ಆಗಲಿದೆ ಬಹು ದೊಡ್ಡ ಬದಲಾವಣೆ
ಯೋಜನೆಯ ಲಾಭವನ್ನು ಯಾರು ಪಡೆಯುತ್ತಾರೆ?
ಗಮನಿಸಬೇಕಾದ ಸಂಗತಿಯೆಂದರೆ, ಈ ಹಿಂದೆ ಪ್ರಧಾನಮಂತ್ರಿ ಆವಾಸ್ ಯೋಜನೆಯ (PMAY) ಪ್ರಯೋಜನವು ಬಡ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಗೃಹ ಸಾಲದ (home loan) ಮೊತ್ತವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರಿಗೂ ಅದರ ಲಾಭವನ್ನು ನೀಡಲಾಗುತ್ತಿದೆ. ಈ ಹಿಂದೆ, ಪಿಎಂಎವೈನಲ್ಲಿ ಗೃಹ ಸಾಲದ ಮೊತ್ತವು 3 ರಿಂದ 6 ಲಕ್ಷದವರೆಗೆ ಇತ್ತು, ಅದರ ಮೇಲೆ ಬಡ್ಡಿ ಮೇಲೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಈಗ ಅದನ್ನು 8 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಯೋಜನೆಯ ವ್ಯಾಪ್ತಿಯನ್ನು ತಿಳಿಯಿರಿ :
EWS ಗೆ ವಾರ್ಷಿಕ ಆದಾಯವನ್ನು 3 ಲಕ್ಷಕ್ಕೆ ನಿಗದಿಪಡಿಸಲಾಗಿದೆ. LIG ಯ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದವರೆಗೆ ಇರಬೇಕು. ಅದೇ ಸಮಯದಲ್ಲಿ, ಈಗ 12 ಮತ್ತು 18 ಲಕ್ಷದವರೆಗೆ ವಾರ್ಷಿಕ ಆದಾಯವಿರುವ ಜನರು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : Ujjwala Yojana: ಈ ದಾಖಲೆ ಇದ್ದರೆ ಸಾಕು ಉಚಿತವಾಗಿ ಪಡೆಯಬಹುದು LPG ಸಿಲಿಂಡರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ