Tirupati online booking : ತಿರುಪತಿ ತಿಮ್ಮಪ್ಪನ ದೇವಾಲಯ ವಿಶ್ವವಿಖ್ಯಾತ ದೇವಾಲಯಗಳಲ್ಲಿ ಒಂದು. ಭಾರತ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಬಾಲಾಜಿ ದರ್ಶನ ಪಡೆಯುತ್ತಾರೆ. ಸಧ್ಯ ದೇವಸ್ಥಾನ ಆಡಳಿತ ಮಂಡಳಿ 300 ರೂಪಾಯಿಯ ವಿಶೇಷ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಅವಕಾಶ ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.


COMMERCIAL BREAK
SCROLL TO CONTINUE READING

ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯದಲ್ಲಿ ದರ್ಶನವನ್ನು ಮಾಡಲು ದೇವಸ್ಥಾನವು ಪ್ರತಿ ತಿಂಗಳು ಆನ್‌ಲೈನ್ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, ಏಪ್ರಿಲ್‌ ತಿಂಗಳ ವಿಶೇಷ ದರ್ಶನ ಟಿಕೆಟ್ ಬುಕ್ಕಿಂಗ್‌ ಇಂದು ಬೆಳಿಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಿವೆ. ಅಲ್ಲದೆ, ತಿರುಮಲದಲ್ಲಿನ ಕೊಠಡಿಗಳ ಮೀಸಲಾತಿ ಟಿಕೆಟ್‌ಗಳು ಜನವರಿ 25 ಅಂದ್ರೆ ನಾಳೆ ಬಿಡುಗಡೆಯಾಗಲಿವೆ. ಅದರಂತೆ ಭಕ್ತರು ಸೂಕ್ತ ಯೋಜನೆಗಳನ್ನು ಮಾಡಿಕೊಳ್ಳಬೇಕಾಗಿ ಆಡಳಿತ ಮಂಡಳಿ ಭಕ್ತರಲ್ಲಿ ವಿನಂತಿಸಿಕೊಂಡಿದೆ.


ಇದನ್ನೂ ಓದಿ:ಭಾರತದ ಶ್ರೀಮಂತ ದೇವಾಲಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?


ಹಿರಿಯ ನಾಗರಿಕರು, ವಿಕಲಚೇತನರಿಗೆ ಆದ್ಯತೆ ಆಧಾರಿತ ದರ್ಶನ ಟೋಕನ್‌ಗಳನ್ನು ನಿನ್ನೆ ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಶ್ರೀವಾರಿ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ಈ ತಿಂಗಳ 27 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಹೆಸರನ್ನು ದೇವಸ್ತಾನದ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು. 


ಅಲ್ಲದೆ, ಜನವರಿ 27 ರಂದು ಮಧ್ಯಾಹ್ನ 12 ರಿಂದ ತಿರುಪತಿ ಬೆಟ್ಟದಲ್ಲಿ ನಡೆಯುವ ನವನೀತ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವ ಭಕ್ತರು ಮತ್ತು ಮಧ್ಯಾಹ್ನ 1 ಗಂಟೆಯಿಂದ ಕಾಣಿಕೆ ಹುಂಡಿ ಎಣಿಸುವ ಬಾರಕಮಣಿ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ದೇವಸ್ತಾನದ ವೆಬ್‌ಸೈಟ್ https: //tirupatibalaji.Ap.Gov.in  ಕೂಡ ಪ್ರಕಟಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.