ನವದೆಹಲಿ : ಕರೋನಾ ರಕ್ಕಸನ ಎರಡನೇ ಅಲೆ ಎದುರಿಸಲಾಗದೇ ಜರ್ಜರಿತವಾಗಿರುವ ನಡುವೆಯೇ ದೇಶದ ಪ್ರಮುಖ ವಿಜ್ಞಾನಿಗಳು ಇದೀಗ ಕರೋನಾ ವೈರಸ್ ನ (Coronavirus) ಮೂರನೇ ಅಲೆ ಅಪ್ಪಳಿಸುವ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.  ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ವಿಜಯ ರಾಘವನ್ (Vijay Raghavan) ಪ್ರಕಾರ ಕರೋನಾ ರಕ್ಕಸನ ಮೂರನೇ ಅಲೆ (Corona third wave) ಅಪ್ಪಳಿಸುವುದು ಶತಸಿದ್ದ. ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಯಾವಾಗ ಅಪ್ಪಳಿಸಲಿದೆ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ. 


COMMERCIAL BREAK
SCROLL TO CONTINUE READING

ವಿಜಯ ರಾಘವನ್ ಹೇಳಿಕೆಯ ಮುಖ್ಯಾಂಶಗಳನ್ನು ಓದಿ :
1. ವೈರಸ್ (Virus) ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ. ಹಾಗಾಗಿ ಮೂರನೇ ಅಲೆ ಎದುರಿಸಲು ನಾವು ಸಜ್ಜಾಗಿರಬೇಕು. 
2. ವಾಕ್ಸಿನೇಶನ್ (Vaccination) ಹಾಕಿಸಿಕೊಂಡ ಬಳಿಕವೂ, ಜನರಿಗೆ ಸೋಂಕು ಉಂಟುಮಾಡಲು ವೈರಸ್ ಕೂಡಾ ಹೊಸ ಐಡಿಯಾ ಹುಡುಕುತ್ತಿರುತ್ತದೆ. ಅದಕ್ಕಾಗಿ ನಾವು ತಯಾರಾಗಿರಬೇಕು. 


ಇದನ್ನೂ ಓದಿ : Total Lockdown : ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಮೇ 16 ರವರೆಗೆ ಸಂಪೂರ್ಣ ಲಾಕ್‌ಡೌನ್!


3. ವೈರಸ್ ರೂಪ ಬದಲಿಸುತ್ತಿದೆ. ಹಾಗಾಗಿ, ನಮ್ಮ ವಾಕ್ಸಿನ್ ಮತ್ತು ಇತರ ಮುನ್ನೆಚ್ಚರಿಕೆಯ ರಣತಂತ್ರ ಬದಲಾಗುತ್ತಿರಬೇಕು.
4. ಎರಡನೇ ಅಲೆ (Corona second wave) ಹಾಹಾಕಾರ ಎಬ್ಬಿಸಲು ಮುಖ್ಯ ಕಾರಣ ರೂಪಾಂತರಿತ ವೈರಸ್. ಎರಡನೇ ಅಲೆ ತೀವ್ರತೆ ಎಬ್ಬಿಸಲು ಮತ್ತೊಂದು ಕಾರಣ ನಮ್ಮ ದೇಹ ರೋಗ ಪ್ರತಿರೋಧಕ ಶಕ್ತಿ (Immunity) ಆ ರೂಪಾಂತರಿತ ವೈರಸನ್ನು ಎದುರಿಸುವಷ್ಟು ಬಲಿಷ್ಠವಾಗಿರಲಿಲ್ಲ. 
5. ಮೊದಲ ಅಲೆ ಮುಗಿಯಲು ಮುಖ್ಯ ಕಾರಣ ಸಾಂಕ್ರಾಮಿತರಾದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು. ಮತ್ತೊಂದು ಕಾರಣ, ಜನ ಕರೋನಾ ಮಾರ್ಗದರ್ಶಿ ನಿಯಮಗಳನ್ನು (COVID Guidelines) ಕಟ್ಟು ನಿಟ್ಟಾಗಿ ಪಾಲಿಸಿದ್ದು. ಯಾವಾಗ ಆ ಕಟ್ಟು ನಿಟ್ಟು ಕಡಿಮೆ ಆಯಿತೋ ಕರೋನಾ ರೂಪಾಂತರಿತವಾಗಿ ಮತ್ತೊಮ್ಮೆ ದಾಂಗುಡಿ ಇಟ್ಟಿತು. 


ಇದನ್ನೂ ಓದಿ : Oxygen ಕೊರತೆಯಿಂದಾಗಿ ಭಯಪಡಬೇಡಿ, ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸಲಿದೆ


6. ಸಾಮಾನ್ಯವಾಗಿ ಎರಡನೇ ಅಲೆ, ಮೊದಲನೇ ಅಲೆಗಿಂತ ಕಡಿಮೆ ಸಮಯದಲ್ಲಿ ಕೊನೆಗೊಳ್ಳುತ್ತದೆ. ಆದರೆ ವೈರಸ್ ಮತ್ತೆ ಮ್ಯೂಟೇಟ್ ಆದರೆ, ಎರಡನೇ ಅಲೆ ಇನ್ನಷ್ಟು ವಿಸ್ತರಿತವಾಗಬಹುದು. ಸೋಂಕು ಹರಡಲು ಅವಕಾಶ ಮಾಡಿಕೊಟ್ಟರೆ, ಸೋಂಕು ಹರಡುತ್ತಲೇ ಇರುತ್ತದೆ.


mask) ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು (Social distancing) ಇತ್ಯಾದಿ.
3. ಮೂರನೇ ಅಸ್ತ್ರ ಮೆಡಿಕಲ್ ಮೂಲಸೌಕರ್ಯಗಳನ್ನು ಬಲಪಡಿಸುವುದು.


ಇದನ್ನೂ ಓದಿ : Big Decision: Corona ವಿರುದ್ಧದ ಹೋರಾಟದಲ್ಲಿ 'Antibody Cocktail' ಬಳಕೆಗೆ CSSCO ಅನುಮತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.