ಅಮರಾವತಿ: ಪ್ರಧಾನಿ ಮೋದಿಗೆ ಖಾಲಿ ಕೈಯಲ್ಲಿ ಆಂಧ್ರಪ್ರದೇಶಕ್ಕೆ ಭೇಟಿ ನೀಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು  ಚಂದ್ರಬಾಬು ನಾಯ್ಡು  ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶದ ಮರು ವಿಂಗಡಣಾ ಕಾಯ್ದೆ 2014 ರನ್ವಯ ಐದು ಕೋಟಿ ಜನರ ಭರವಸೆಗಳನ್ನು ಈಡೇರಿಸುವುದಕ್ಕೆ ವಿವರಣೆ ನೀಡಬೇಕೆಂದು ಸಿಎಂ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ. ಪ್ರಧಾನಿಯ ವಿಶಾಖಪಟ್ಟಣದ ಪ್ರವಾಸಕ್ಕೂ ಮುನ್ನ ಪತ್ರ ಬರೆದಿರುವ ಸಿಎಂ ನಾಯ್ಡು ಮರುವಿಂಗಡನಾ ಕಾಯ್ದೆ ಜಾರಿಗೆ ಬಂದು 59 ತಿಂಗಳಾಗಿದ್ದರೆ ಮೋದಿ ಪ್ರಧಾನಿ ಹುದ್ದೆಗೆ ಏರಿ 57 ತಿಂಗಳುಗಳಾಗಿವೆ. ಐದು ವರ್ಷಗಳಾದವು ಇನ್ನು ಯಾವುದೇ ಭರವಸೆ ಈಡೆರಿಲ್ಲವೆಂದು ತಿಳಿಸಿದರು.


"ನಾನು ವೈಯಕ್ತಿಕವಾಗಿ 29 ಬಾರಿ ದೆಹಲಿಗೆ ಭೇಟಿ ನೀಡಿದ್ದೇನೆ ಮತ್ತು ನಿಮಗೆ ಹಲವಾರು ಮನವಿಗಳನ್ನು ಮಾಡಿದ್ದೇನೆ, ಆದರೆ ಯಾವುದೇ ಪ್ರಯೋಜನವಿಲ್ಲ" ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಆಂಧ್ರಪ್ರದೇಶದ ಜನರು "ನಿಮ್ಮ ದ್ರೋಹ, ಅನ್ಯಾಯ ಮತ್ತು ಮೋಸ" ದಿಂದ ಜನರು ಆಕ್ರೋಶಗೊಂಡಿದ್ದಾರೆ.ಇಡೀ ದೇಶವು ಆಂಧ್ರಪ್ರದೇಶದ ಹಕ್ಕುಗಳಿಗಾಗಿ ಪಡೆಯಲು "ಧರ್ಮಪೋರಾಟಮ್" (ಕೇವಲ ಹೋರಾಟವನ್ನು) ಮಾಡಿದರು ಪ್ರಧಾನಿ ಅಥವಾ ಬಿಜೆಪಿ ಪ್ರತಿಕ್ರಿಯಿಸಿಲ್ಲ ಎಂದರು.