ನವದೆಹಲಿ: ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸಶಸ್ತ್ರ ದರೋಡೆಕೋರರು ನಡೆಸಿದ ದಾಳಿಯಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಅವರ 58 ವರ್ಷದ ಚಿಕ್ಕಪ್ಪ ಸಾವನ್ನಪ್ಪಿದ್ದರೆ, ಅವರ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಸರ್ಕಾರಿ ಗುತ್ತಿಗೆದಾರ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.


COMMERCIAL BREAK
SCROLL TO CONTINUE READING

ಆಗಸ್ಟ್ 19 ಮತ್ತು 20 ರ ಮಧ್ಯರಾತ್ರಿ ಪಂಜಾಬ್‌ನ ಪಠಾಣ್‌ಕೋಟ್‌ನ ತರಿಯಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಶೋಕ್ ಕುಮಾರ್ ಅವರ ಹಿರಿಯ ಸಹೋದರ ಶ್ಯಾಮ್ ಲಾಲ್ ರೈನಾ ಅವರ ಚಿಕ್ಕಪ್ಪ ಎಂದು ದೃಢಪಡಿಸಿದರು. ರೈನಾ ಗ್ರಾಮಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.


UAEಯಿಂದ ಇದ್ದಕ್ಕಿದ್ದಂತೆ ಭಾರತಕ್ಕೆ ಮರಳಿದ ಸುರೇಶ ರೈನಾ, ಐಪಿಎಲ್ ಪೂರ್ಣ ಋತುವಿನಿಂದ ಹೊರಕ್ಕೆ


ಪೊಲೀಸರ ಪ್ರಕಾರ, ಕುಖ್ಯಾತ 'ಕೇಲ್ ಕಚೆವಾಲಾ' ಗ್ಯಾಂಗ್‌ನ ಮೂರರಿಂದ ನಾಲ್ಕು ಸದಸ್ಯರು ಲೂಟಿ ಮಾಡುವ ಉದ್ದೇಶದಿಂದ ಬಂದಿದ್ದರು, ಅಶೋಕ್ ಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಪಠಾಣ್‌ಕೋಟ್‌ನ ಮಾಧೋಪುರ ಬಳಿಯ ತರಿಯಾಲ್ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಹಲ್ಲೆ ನಡೆಸಿದ್ದಾರೆ.ದಾಳಿಯ ಸಮಯದಲ್ಲಿ, ಅವರು ತಮ್ಮ ಮನೆಯ ಟೆರೇಸ್‌ನಲ್ಲಿ ಮಲಗಿದ್ದರು. ಅಶೋಕ್ ಕುಮಾರ್ ತಲೆಗೆ ಪೆಟ್ಟಾಗಿದ್ದು, ಅದೇ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಅಶೋಕ್ ಕುಮಾರ್ ಸಾವನ್ನು ಧೃಡಿಕರಿಸಿದ ಪಠಾಣ್‌ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ."ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಎಸ್‌ಎಸ್‌ಪಿ ಹೇಳಿದರು.ಪೊಲೀಸರ ಪ್ರಕಾರ, ದರೋಡೆಕೋರರು ಮನೆಯಿಂದ ಸ್ವಲ್ಪ ನಗದು ಮತ್ತು ಚಿನ್ನವನ್ನು ದೋಚಿದ್ದಾರೆ ಎನ್ನಲಾಗಿದೆ.


ಅಶೋಕ್ ಕುಮಾರ್ ಅವರ 80 ವರ್ಷದ ತಾಯಿ ಸತ್ಯ ದೇವಿ, ಅವರ ಪತ್ನಿ ಆಶಾ ದೇವಿ, ಪುತ್ರರಾದ ಅಪಿನ್ ಮತ್ತು ಕುಶಾಲ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸತ್ಯ ದೇವಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಠಾಣ್‌ಕೋಟ್ ಪೊಲೀಸ್ ವರಿಷ್ಠಾಧಿಕಾರಿ ಪ್ರಭೋತ್ ಸಿಂಗ್ ವಿರ್ಕ್ ತಿಳಿಸಿದ್ದಾರೆ.