ಬಜರಂಗದಳ ಕಾರ್ಯಕರ್ತರಿಗೆ ಸಶಸ್ತ್ರ ತರಬೇತಿ
ಬಜರಂಗದಳದ ಕಾರ್ಯಕರ್ತರಿಗೆ ಮೇ 3 ರಿಂದ 11ರವರೆಗೆ ಬಂದೂಕು, ಮಾರಕಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.
ಮಧ್ಯಪ್ರದೇಶ(ರಾಜ್ ಗರ್): ಮಧ್ಯಪ್ರದೇಶದ ರಾಜ್ ಗರ್ ಜಿಲ್ಲೆಯಲ್ಲಿ ಹಿಂದೂಗಳ ರಕ್ಷಣೆಯ ಹೆಸರಿನಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಮೇ 3 ರಿಂದ 11ರವರೆಗೆ ಬಂದೂಕು, ಮಾರಕಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.
ದೇಶದ್ರೋಹಿ ಮತ್ತು ಲವ್ ಜಿಹಾದ್ ಶಕ್ತಿಗಳನ್ನು ಮಟ್ಟಹಾಕಲು ಈ ಶಿಬಿರ ನೆರವಾಗಲಿದೆ. ಪ್ರತಿವರ್ಷದಂತೆ ಈ ವರ್ಷವೂ ಶಿಬಿರ ಆಯೋಜಿಸಲಾಗಿದೆ ಎಂದು ಸಂಘಟನೆಯ ಸ್ಥಳೀಯ ಜಿಲ್ಲಾ ಸಂಚಾಲಕ ದೇವಿ ಸಿಂಗ್ ಸೊಂಧಿಯಾ ಹೇಳಿದ್ದಾರೆ.