ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
ನಾಯಕರು ಜನರಿಗೆ ತಪ್ಪು ನಿರ್ದೇಶನ ನೀಡುವವರಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧವಾಗಿ ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರತಿಕ್ರಿಯಿಸಿದ್ದು, 'ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ' ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥರು, 'ನಾವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ನೋಡುತ್ತಿರುವಂತೆ. ನಗರಗಳು ಮತ್ತು ಪಟ್ಟಣಗಳಲ್ಲಿ ಹಿಂಸಾಚಾರಕ್ಕೆ ನಾಂದಿ ಹಾಡಿದ ಜನಸಂದಣಿಯನ್ನು ವಿದ್ಯಾರ್ಥಿಗಳು ಮುನ್ನಡೆಸುತ್ತಿದ್ದಾರೆ. ಇದು ನಾಯಕತ್ವವಲ್ಲ' ಎಂದರು.
'ನಾವು ಶೀತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ದೆಹಲಿಯಲ್ಲಿದ್ದಾಗ, ಸಿಯಾಚೆನ್‌ನ ಸಾಲ್ಟೊರೊ ರಿಡ್ಜ್‌ನಲ್ಲಿರುವ ನಮ್ಮ ಸೈನಿಕರು ನಿರಂತರವಾಗಿ ದೇಶದ ಭದ್ರತೆಯಲ್ಲಿ ನಿಂತಿದ್ದಾರೆ. ಅಲ್ಲಿನ ತಾಪಮಾನವು -10 ರಿಂದ -45 ಡಿಗ್ರಿಗಳ ನಡುವೆ ಇರುತ್ತದೆ. ನಾನು ಆ ಸೈನಿಕರಿಗೆ ನಮಸ್ಕರಿಸುತ್ತೇನೆ ಎಂದು ಸೈನ್ಯದ ಭದ್ರತೆಯಲ್ಲಿ ತೊಡಗಿರುವ ಸೈನಿಕರ ಉತ್ಸಾಹಕ್ಕೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಮಸ್ಕರಿಸಿದರು.