An army chopper crashed in Jammu and Kashmir's Kishtwar: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮರ್ವಾ ತೆಹಸಿಲ್‌ನ ಮಚ್ನಾ ಗ್ರಾಮದ ಸಮೀಪದಲ್ಲಿ ಸೇನಾ ಚಾಪರ್‌ವೊಂದು ಪತನಗೊಂಡಿರುವ ದುರ್ಘಟನೆ ಸಂಭವಿಸಿದೆ. 


COMMERCIAL BREAK
SCROLL TO CONTINUE READING

ಲಭ್ಯವಿರುವ ಮಾಹಿತಿಯ ಪ್ರಕಾರ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮರ್ವಾ ತೆಹಸಿಲ್‌ನ ಮಚ್ನಾ ಎಂಬ ಗ್ರಾಮದ ಬಳಿ ಗುರುವಾರ (04  ಮೇ 2023) ಈ ದುರ್ಘಟನೆ ಸಂಭವಿಸಿದ್ದು, ಸೇನಾ ಚಾಪರ್ ಪತನಕ್ಕೀಡಾದಾಗ ಅದರಲ್ಲಿ ಮೂರು ಮಂದಿ ಇದ್ದರು ಎಂದು ತಿಳಿದುಬಂದಿದೆ. 


Rain Update: ಮೇ 5ರವರೆಗೆ ರಾಜ್ಯದಲ್ಲಿ ಭಾರೀ ವರ್ಷಧಾರೆ: 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್! ಯಾವ್ಯಾವ ಜಿಲ್ಲೆಗಳಿವೆ?


ಕಿಶ್ತ್ವಾರ್ ಜಿಲ್ಲೆಯ ಮಚ್ನಾ ಗ್ರಾಮದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ತನ್ನ ನಿತ್ಯದ ಕಾರ್ಯಾಚರಣೆಯಲ್ಲಿದ್ದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು ನಡಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಹುತಾತ್ಮರಾಗಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. 


ಜಮ್ಮು ಮತ್ತು ಕಾಶ್ಮೀರದ  ಕಿಶ್ತ್ವಾರ್ ಪ್ರದೇಶದ ಬಳಿ ಸೇನೆಯ ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಇಂದು ( ಗುರುವಾರ) ಬೆಳಗ್ಗೆ ಪತನಗೊಂಡಿದೆ. ಈ ಸಂದರ್ಭದಲ್ಲಿ ಮೂರು ಮಂದಿ ವಿಮಾನದಲ್ಲಿದ್ದರು. ಪೈಲಟ್‌ಗಳು ಗಾಯಗೊಂಡಿದ್ದಾರೆ ಆದರೆ ಸುರಕ್ಷಿತವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ- Cyberattack: ಸೈಬರ್ ದಾಳಿಗೆ ಮನನೊಂದು ಯುವತಿ ಆತ್ಮಹತ್ಯೆ..!


ಆದಾಗ್ಯೂ, ಸೇನಾ ಚಾಪರ್ ಪತನಕ್ಕೆ ತಾಂತ್ರಿಕ ದೋಷ ಕಾರಣವಿರಬಹುದೇ ಅಥವಾ ಕಳಪೆ ಗೋಚರಂತೆಯಿಂದಾಗಿ ಈ ಅಪಘಾತ ಸಂಭವಿಸಿರಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.