Soldier missing in Kulgam Jammu Kashmir: ಭಾರತೀಯ ಸೇನೆಯ ಯೋಧ ಶನಿವಾರ ಸಂಜೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ತನ್ನ ಸ್ವಗ್ರಾಮ ಅಷ್ಟಾಲ್ ಪ್ರದೇಶದಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಆತನ ಪತ್ತೆಗೆ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಆರಂಭಿಸಿವೆ. ಇಡೀ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜಂಟಿ ಕಾರ್ಯಾಚರಣೆ ಆರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ


ಕುಲ್ಗಾಮ್‌ ನ ಅಷ್ಟಾಲ್ ಪ್ರದೇಶದ ನಿವಾಸಿ ಜಾವಿದ್ ಅಹ್ಮದ್ ವಾನಿ ಅವರ ಪುತ್ರ ಮುಹಮ್ಮದ್ ಅಯ್ಯೂಬ್ ವಾನಿ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಕೆಲವು ಶಾಪಿಂಗ್‌ ಗಾಗಿ ಚವಲ್ಗಾಮ್ ಮಾರುಕಟ್ಟೆಗೆ ಹೋಗಿದ್ದರು. ವಾಪಸ್ಸು ಬರುವಾಗ ಬೇರೊಂದು ಮಾರ್ಗವನ್ನು ಆರಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಆದರೆ ನಾಪತ್ತೆಯಾಗಿದ್ದ ಜವಾನನ ರಕ್ತಸಿಕ್ತ ಕಾರು ಆತನ ಮನೆಯಿಂದ 3 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.


ಅಧಿಕಾರಿಯೊಬ್ಬರು ಹೇಳುವಂತೆ “ಕಳೆದ ಸಂಜೆ ಅವರು ಕೆಲವು ಆಹಾರ ಪದಾರ್ಥಗಳನ್ನು ಖರೀದಿಸಲೆಂದು ತಮ್ಮ ಗುರುತಿನ ಚೀಟಿ (ಜೆಕೆ-18 ಬಿ 7201) ಹೊಂದಿರುವ ಆಲ್ಟೋ ವಾಹನದಲ್ಲಿ ಚವಲ್ಗಾಮ್ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿಂದ ತಮ್ಮ ಮನೆಗೆ ಹಿಂತಿರುಗಿಲ್ಲ”


ಈ ಮಧ್ಯೆ ವೀಡಿಯೊ ಸಂದೇಶದಲ್ಲಿ, ಕಾಣೆಯಾದ ಯೋಧನ ತಾಯಿ ತನ್ನ ಮಗನನ್ನು ಹಿಂದಿರುಗಿಸುವಂತೆ ಪ್ರಾರ್ಥಿಸಿದ್ದಾರೆ. “ನನ್ನ ಮಗ ಮುಗ್ಧ, ಅವನು ತುಂಬಾ ಚಿಕ್ಕವನು. ನನ್ನ ಮಗ ಏನಾದರೂ ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಮಗನಿಗೆ ಮನೆಗೆ ಮರಳಲು ಅವಕಾಶ ನೀಡಬೇಕು ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಕಣ್ಣೀರು ಸುರಿಸಿದ್ದಾರೆ.


ಇದನ್ನೂ ಓದಿ: WATCH: ಮಳೆಯಲಿ ಮಿಂದ ರಚಿತಾ ರಾಮ್‌.. ಮುದ್ದು ಬೊಂಬೆ ಎಂದ ಫ್ಯಾನ್ಸ್‌!


ಯೋಧನಿಗಾಗಿ ಮುಂದುವರಿದ ಶೋಧ:


ಯೋಧನ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ರೀತಿಯ ಘಟನೆ ಕಾಶ್ಮೀರದಲ್ಲಿ ಬಹಳ ದಿನಗಳ ನಂತರ ಕಂಡುಬಂದಿದೆ. ಕಳೆದ ವರ್ಷ ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಸೇನಾ ಯೋಧ ಸಮೀರ್ ಅಹ್ಮದ್ ಮಲ್ಲಾನನ್ನು ಅಪಹರಿಸಿ ಹತ್ಯೆ ಮಾಡಿತ್ತು. ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಉದ್ಯಾನದಲ್ಲಿ ಅವರ ಶವ ಪತ್ತೆಯಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ