2016ರ ಸರ್ಜಿಕಲ್ ದಾಳಿಯ ಹೊಸ ವಿಡಿಯೋಗಳು ರಿಲೀಸ್
ಈ ದಾಳಿಯು ಭಾರತೀಯ ಸೈನ್ಯದ ಪ್ಯಾರಾ ಕಮಾಂಡೋಸ್ನ 8 ತಂಡಗಳಿಂದ ನಡೆಸಲ್ಪಟ್ಟಿತು. ಉಗ್ರಗಾಮಿಗಳ ನೆಲೆಗಳನ್ನು ನಾಶಮಾಡಲು ಈ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು.
ನವದೆಹಲಿ: ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ(LoC) ಬಳಿ 2016ರ ಸೆಪ್ಟೆಂಬರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಈ ದಾಳಿಯ 636 ದಿನಗಳ ನಂತರ ಅತಿದೊಡ್ಡ ಸಾಕ್ಷಿಯಾಗಿ ವಿಡಿಯೋ ಒಂದು ಹೊರಹೊಮ್ಮಿತ್ತು. ಇದೀಗ 2016ರ ಸರ್ಜಿಕಲ್ ದಾಳಿಯ ಹೊಸ ವಿಡಿಯೋವೊಂದು ಗುರುವಾರ ಬಿಡುಗಡೆಗೊಂಡಿದೆ.
ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಹಿರಂಗ
ನಿನ್ನೆ ಬಿಡುಗಡೆಗೊಳಿಸಿರುವ ಸರ್ಜಿಕಲ್ ದಾಳಿಯ ವಿಡಿಯೋವನ್ನು ಡ್ರೋನ್ ವಿಮಾನಗಳ ಮೂಲಕ ಥರ್ಮಲ್ ಕ್ಯಾಮರಾಗಳಿಂದ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ಯೋಧರು, ಉಗ್ರರ ಶಿಬಿರಗಳು ಹಾಗೂ ಉಗ್ರರು ಭಾರತದೊಳಗೆ ನುಸುಳಲು ಬಳಸುತ್ತಿದ್ದ ಪ್ರದೇಶದ ಸಮೀಪವೇ ಇರುವ ಪಾಕ್ ಠಾಣೆ ಸೇರಿದಂತೆ ನಾಲ್ಕು ಗುರಿಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
ಸರ್ಜಿಕಲ್ ಸ್ಟ್ರೈಕ್ ಎಂದರೇನು?
ನಿರ್ದಿಷ್ಟ ಗುರಿಗಳನ್ನು ಗುರುತಿಸಿ ನಿಖರವಾಗಿ ನಡೆಸಲಾಗುವ ದಾಳಿ ಸರ್ಜಿಕಲ್ ಸ್ಟ್ರೈಕ್. ಯಾವುದೇ ಸೀಮಿತ ಪ್ರದೇಶದಲ್ಲಿ, ಮಿಲಿಟರಿ ಶತ್ರುಗಳ ಮತ್ತು ಭಯೋತ್ಪಾದಕರನ್ನು ಹಾನಿಮಾಡಲು ಮಿಲಿಟರಿ ಕಾರ್ಯಾಚರಣೆಯನ್ನು ತೆಗೆದುಕೊಳ್ಳುತ್ತದೆ ಅದನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗುತ್ತದೆ.