ನವದೆಹಲಿ: ಜಮ್ಮು ಮತ್ತು ಕಾಶ್ಮಿರಕ್ಕೆ ನೀಡಿದ್ದ 370 ನೇ ವಿಧಿ ರದ್ದು ಪಡಿಸಿದ ನಂತರ ಮೊದಲ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರವನ್ನು ಐತಿಹಾಸಿಕ ಎಂದು ಕರೆದರು.'370 ನೇ ವಿಧಿಯನ್ನು ರದ್ದುಗೊಳಿಸುವುದರೊಂದಿಗೆ, ದೇಶವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ದಾರ್ ಪಟೇಲ್ ಅವರ ಕನಸುಗಳು ನನಸಾಗಿವೆ' ಎಂದು ಪ್ರಧಾನಿ ಹೇಳಿದರು.



COMMERCIAL BREAK
SCROLL TO CONTINUE READING

ಕಾಶ್ಮೀರದಲ್ಲಿ  370 ನೇ ವಿಧಿ ಭಯೋತ್ಪಾದನೆ, ನಿಧಾನಗತಿಯ ಅಭಿವೃದ್ಧಿ, ಕುಟುಂಬ ಆಧಾರಿತ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಮಾತ್ರ ಪ್ರೋತ್ಸಾಹಿಸಿತು. 370 ಹಾಗೂ 35 (ಎ ) ಕಲಂಗಳು ಕಣಿವೆಯಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸಿ ಪಾಕ್ ಮೂಲಕ ರಾಷ್ಟ್ರ ವಿರೋಧಿ ಭಾವನೆಗಳನ್ನು ಸೃಷ್ಟಿಮಾಡಿದ್ದವು. ಇದರಿಂದಾಗಿ ಸುಮಾರು 42,000 ಮುಗ್ಧ ಜನರಲ್ಲಿ ಸಾಯಬೇಕಾಗಿತ್ತು ಎನ್ನುವ ಈ ಅಂಕಿ ಅಂಶವು ಯಾರ ಕಣ್ಣಲ್ಲಾದರೂ ನೀರನ್ನು ತರಿಸುತ್ತದೆ ಎಂದು ಹೇಳಿದರು.



370 ನೇ ವಿಧಿ ರದ್ದತಿಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಇದು ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸುತ್ತಿಲ್ಲ ಎಂದು ಹೇಳಿದರು. '370ನೇ ವಿಧಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೇಗೆ ಪ್ರಯೋಜನವಾಯಿತು ಎಂದು ಯಾರೂ ಹೇಳಲಾರರು, ಆದರೆ ಕಲಂನಿಂದಾಗಿ ರಾಜ್ಯದಲ್ಲಿ ಪ್ರತ್ಯೇಕತಾವಾದ, ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕುಟುಂಬ ಆಡಳಿತ ಬೆಳೆಯಿತೆ ಹೊರತು ಮತ್ತೇನಲ್ಲ ಎಂದು ಹೇಳಿದರು. ಇದೇ ವೇಳೆ ಮುಂಬರುವ ದಿನಗಳಲ್ಲಿ ಪಾರದರ್ಶಕ ಹಾಗೂ ಮುಕ್ತ ವಿಧಾನಸಭೆ ಚುನಾವಣೆಯ ಭರವಸೆಯನ್ನು ಪ್ರಧಾನಿ ನೀಡಿದರು. ಲಡಾಖ್ ಮತ್ತು ಜಮ್ಮು ಕಾಶ್ಮೀರ ಜಗತ್ತಿನ ಪ್ರಮುಖ ಪ್ರವಾಸಿ ತಾಣವಾಗುವ ಸಾಮರ್ಥ್ಯದ ಬಗ್ಗೆ ಮೋದಿ ಭರವಸೆ ವ್ಯಕ್ತಪಡಿಸಿದರು.