Shampoo art : ಸೋಷಿಯಲ್‌ ಮೀಡಿಯಾ ಪ್ರತಿಭಾವಂತ ಕಲಾವಿದರಿಗೆ ತಮ್ಮ ಅದ್ಭುತ ಸಾಮರ್ಥ್ಯ ಮತ್ತು ಸೃಜನಶೀಲ ಕಲ್ಪನೆಗಳಿಗೆ ಒಂದು ವೇದಿಕೆಯಾಗಿದೆ. ಆಗಾಗ ಅಂತರ್ಜಾಲದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಅದೇಷ್ಟೋ ಕಲಾವಿದರು ಜನಪ್ರಿಯರಾಗುತ್ತಿದ್ದಾರೆ. ಇದೀಗ ಶಾಂಪೂವಿನಿಂದ ಶಿವನ ಚಿತ್ರ ಬಿಡಿಸಿರುವ ಆರ್ಟಿಸ್ಟ್‌ ಕೈಚಳಕದ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಜನ ಮೆಚ್ಚುಗೆ ಪಡೆಯುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಸೋಷಿಯಲ್‌ ಮೀಡಿಯಾದ ಮೂಲಕ ಯಾರು ಯಾವಾಗ ಸ್ಟಾರ್‌ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ತಮ್ಮ ಕಲೆಯನ್ನು ಅನಾವರಣಗೊಳಿಸುವ ಆರ್ಟಿಸ್ಟ್‌ಗಳು ವೈರಲ್‌ ಆಗುತ್ತಿರುತ್ತಾರೆ. ಇದೇ ಸಾಲಿನಲ್ಲಿ ಇದೀಗ ಶಾಂಪೂವಿನಲ್ಲಿ ಅರಳಿದ ಶಿವನ ಚಿತ್ರದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವೈರಲ್‌ ವೀಡಿಯೊವನ್ನು ಕಲಾವಿದ ಶಿಂಟು ಮೌರ್ಯ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ:


ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಶಾಂಪೂ ಬಳಸಿ ಶಿವನ ಸುಂದರ ಚಿತ್ರವನ್ನು ಚಿತ್ರಿಸುತ್ತಿರುವುದನ್ನು ಕಾಣಬಹುದು. ನಿಮಗೆ ಆಚ್ಚರಿಯಾಗಬಹುದು, 'ಇದು ಹೇಗೆ ಸಾಧ್ಯ? ಅಂತ ನೀವಷ್ಟೇ ಅಲ್ಲ, ವಿಡಿಯೋ ನೋಡಿದ ಪ್ರತಿಯೊಬ್ಬರು ಸಹ ಮೂಕವಿಸ್ಮಿತರಾಗುತ್ತಿದ್ದಾರೆ. ನೀವು ಒಮ್ಮೆ ಆ ವಿಡಿಯೋವನ್ನು ನೋಡಿಬಿಡಿ. ಈ ವೀಡಿಯೊವನ್ನು 1 ಮಿಲಿಯನ್‌ಗೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. 79,000 ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿದೆ. ಅನೇಕರು ಈ ಶಿವನ ಚಿತ್ರವನ್ನು ಖರೀದಿಸಬಹುದೇ ಎಂದು ಕೇಳುತ್ತಿದ್ದಾರೆ.