ನವದೆಹಲಿ: ಮಾಜಿ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ (ಏಮ್ಸ್) ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಅನಾರೋಗ್ಯದ ಕಾರಣದಿಂದಾಗಿ ನಿಯಮಿತ ತಪಾಸಣೆಗಾಗಿ ಅವರನ್ನು ಏಮ್ಸ್ ನಲ್ಲಿರುವ ಹೃದ್ರೋಗ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.ಅಂತಃಸ್ರಾವಶಾಸ್ತ್ರಜ್ಞ, ನೆಫ್ರಾಲಜಿಸ್ಟ್ ಮತ್ತು ಹೃದ್ರೋಗ ತಜ್ಞರ ತಂಡವು ಅವರನ್ನು ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕಳೆದ ವರ್ಷ 66 ವರ್ಷದ ಜೇಟ್ಲಿ ಮೂತ್ರಪಿಂಡದ ಕಸಿ ಮಾಡಿದ್ದರು, ಮತ್ತು ಈ ವರ್ಷದ ಜನವರಿಯಲ್ಲಿ ಅಮೇರಿಕಾದಲ್ಲಿ ನಿಯಮಿತ ವೈದ್ಯಕೀಯ ತಪಾಸಣೆಗೆ ತೆರಳಿದ್ದರು. 


ಜೇಟ್ಲಿ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಅನಾರೋಗ್ಯದ ಕಾರಣದಿಂದಾಗಿ ಸ್ಪರ್ಧಿಸಲಿಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2019 ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ನಂತರ, ಪಿಎಂ ಮೋದಿಗೆ ಬರೆದ ಪತ್ರದಲ್ಲಿ ಅನಾರೋಗ್ಯದ ಕಾರಣದಿಂದ ತಾವು ಯಾವುದೇ ಜವಾಬ್ದಾರಿಯಿಂದ ದೂರವಿರುವುದಾಗಿ ತಿಳಿಸಿದ್ದರು.