ಲಂಡನ್: ಹಣಕಾಸು ಸಚಿವ ಅರುಣ್ ಜೈಟ್ಲಿ ಉದ್ಯಮಿ ವಿಜಯ್ ಮಲ್ಯ ತಮ್ಮನ್ನು ಭೇಟಿ ಮಾಡಿರುವ ವಿಷಯವನ್ನು ಅಲ್ಲಗಳೆದಿದ್ದಾರೆ.ಅಲ್ಲದೆ ಮಲ್ಯ ಮಾಡಿರುವ ಆರೋಪ ಶುದ್ದ ಸುಳ್ಳು ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಉದ್ಯಮಿ ವಿಜಯ್ ಮಲ್ಯ ಲಂಡನ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಾ ಭಾರತದಿಂದ ಹೊರಡುವ ಮೊದಲು ಹಣಕಾಸು ಸಚಿವ ಅರುಣ್ ಜೈಟ್ಲಿಯವರನ್ನು ಭೇಟಿ ಮಾಡಿ ತಮ್ಮ ಬ್ಯಾಂಕ್ ಪ್ರಕರಣವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಆಫರ್ ಕುರಿತಾಗಿ ಮಾತುಕತೆ ನಡೆಸಿದ್ದೆ ಎಂದು ಹೇಳಿದ್ದರು. 



ಈಗ ಮಲ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಅರುಣ ಜೈಟ್ಲಿ " ಈ ಹೇಳಿಕೆ ಸುಳ್ಳಾಗಿದ್ದು ಇದು ಸತ್ಯದಿಂದ ಕೂಡಿಲ್ಲ.2014ರಿಂದ ನಾನು ಅವರಿಗೆ ನನ್ನನ್ನು ಭೇಟಿ ಮಾಡಲು ಅನುಮತಿಯನ್ನು ನೀಡಿಲ್ಲ, ಆದ್ದರಿಂದ ಅವರನ್ನು ಭೇಟಿ ಮಾಡಿರುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಜೈಟ್ಲಿ ತಿಳಿಸಿದರು. ಇನ್ನು ಮುಂದುವರೆದು ವಿಜಯ್ ಮಲ್ಯ ಅವರು ರಾಜ್ಯಸಭಾ ಸದಸ್ಯರಾಗಿ ಅದರ ಗೌರವವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜೈಟ್ಲಿ ಮಲ್ಯ ವಿರುದ್ದ ಕಿಡಿ ಕಾರಿದರು. 


ವಿಜಯ್ ಮಲ್ಯ ಅವರು ಮಾತನಾಡುತ್ತಾ "ಈ ಹಿಂದೆಯೂ ನಾನು ಹೇಳಿದ್ದೇನೆ, ನಾನು ರಾಜಕೀಯ ಪುಟ್ಬಾಲ್ ಆಗಿದ್ದೇನೆ.ಆದ್ದರಿಂದ ನನಗೆ ಅದರ ವಿಚಾರವಾಗಿ ಏನು ಮಾಡಲು ಸಾಧ್ಯವಾಗುತ್ತಿಲ್ಲ, ನನ್ನ ಸಾಕ್ಷಿ ಪ್ರಜ್ಞೆ ಸ್ಪಷ್ಟವಾಗಿದ್ದು, ಸುಮಾರು 15 ಸಾವಿರ ಕೋಟಿ ಮೊತ್ತದ ಆಸ್ತಿಯನ್ನು ನಾನು ಕರ್ನಾಟಕ ಹೈಕೋರ್ಟ್ ಟೇಬಲ್ ಮೇಲೆ ಇಟ್ಟಿದ್ದೇನೆ ಎಂದು ಮಲ್ಯ ತಿಳಿಸಿದ್ದಾರೆ. ಈಗ ವಿಜಯ ಮಲ್ಯ ಹೇಳಿರುವ ಹೇಳಿಕೆ ಪ್ರತಿಪಕ್ಷಗಳು ಕೆಂಡಾಮಂಡಲವಾಗಿವೆ. ಅಲ್ಲದೆ ಭ್ರಷ್ಟ ಉದ್ಯಮಪತಿಗಳೊಂದಿಗೆ ಸರ್ಕಾರ ಶಾಮಿಲಾಗಿದೆ ಎಂದು ಸರ್ಕಾರದ ವಿರುದ್ದ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.