ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಅತಿ ಕಡಿಮೆ ಅವಧಿಯಲ್ಲಿ ಸ್ಥಿರತೆ ಕಂಡಿದ್ದು, ಮುಂದಿನ ದಿನಗಳಲ್ಲಿ ತೆರಿಗೆದಾರರ ವ್ಯಾಪ್ತಿ ವಿಸ್ತರಿಸಲು ಮತ್ತು ತೆರಿಗೆ ದರಗಳನ್ನು ಇಳಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, GSTಇಂದಾಗಿ ತೆರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಕಂಡಿದೆ. ಇತರ ದೇಶಗಳಿಗೆ ಹೋಲಿಸಿದರೆ ಜಿಎಸ್ಫ್ತಿ ಜಾರಿಯಾದ ಕಡಿಮೆ ಅವಧಿಯಲ್ಲಿ ಸುಸ್ಥಿತಿಗೆ ಮರಳಿದೆ ಎಂದು ಅವರು ಹೇಳಿದರು. 


‘ಸುಲಲಿತ ವಹಿವಾಟು ಸೂಚ್ಯಂಕದಲ್ಲಿ ಭಾರತವನ್ನು ಮೊದಲ 50 ದೇಶಗಳ ಪಟ್ಟಿಯಲ್ಲಿ ಬರುವಂತೆ ಮಾಡಬೇಕು ಎನ್ನುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. 142ನೇ ಸ್ಥಾನದಲ್ಲಿದ್ದಾಗ 50ರ ಒಳಗೆ ಬರುವುದು ಬಹು ದೊಡ್ಡ ಸವಾಲಾಗುತ್ತಿತ್ತು. ಆದರೆ ಈಗ 100ನೇ ಸ್ಥಾನದಲ್ಲಿದ್ದೇವೆ. ತೆರಿಗೆ ಇಲಾಖೆಯನ್ನೂ ಒಳಗೊಂಡು ಎಲ್ಲರೂ ಒಟ್ಟಾರೆ ಕೆಲಸ ಮಾಡಿದರೆ ಕಷ್ಟವೇನಲ್ಲ’ ಎಂದು ಅವರು ಹೇಳಿದರು.