ನವದೆಹಲಿ: 2018 ರ ಬಜೆಟ್ ಅನ್ನು ಪ್ರಸ್ತುತಪಡಿಸಲು ಕೆಲವೇ ನಿಮಿಷಗಳು ಉಳಿದಿದೆ. ಈ ಬಾರಿ, ಹಣಕಾಸು ಸಚಿವ ಅರುಣ್ ಜೇಟ್ಲಿ ನಾಲ್ಕನೇ ಬಾರಿಗೆ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಆಗಿದೆ. ಈ ಬಾರಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಪ್ರದಾಯವನ್ನು ಮುರಿದು ಹಿಂದಿ ಭಾಷೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದಿ ಭಾಷೆಯಲ್ಲಿ ಬಜೆಟ್ ಮಂಡನೆಯಾಗುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲು.


COMMERCIAL BREAK
SCROLL TO CONTINUE READING

ಸ್ವಾತಂತ್ರ್ಯ ನಂತರ, ಎಲ್ಲಾ ಹಣಕಾಸು ಮಂತ್ರಿಗಳು ಬಜೆಟ್ ಅನ್ನು ಆಂಗ್ಲ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ವಿತ್ತ ಸಚಿವರು ಹಿಂದಿಯಲ್ಲಿ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ. ಇದು ಮೋದಿ ಸರ್ಕಾರದ ಅಂತಿಮ ಪೂರ್ಣಾವಧಿ ಬಜೆಟ್ ಆಗಿದ್ದು, ದೇಶದ ಅರ್ಧಕ್ಕಿಂತ ಹೆಚ್ಚು ಜನತೆ ಹಿಂದಿ ಭಾಷೆ ಮಾತನಾಡುವುದರಿಂದ ಜನರನ್ನು ಸೆಳೆಯಲು ಸರ್ಕಾರ ಪ್ರಯತ್ನಿಸುತ್ತಿದೆ. 


ಅರುಣ್ ಜೇಟ್ಲಿ ಬಜೆಟ್ ಭಾಷಣವನ್ನು ಸಂಸತ್ತಿನಲ್ಲಿ 11 ಗಂಟೆಗೆ ಪ್ರಾರಂಭಿಸುತ್ತಾರೆ. ಜನಸಾಮಾನ್ಯರು ಬಜೆಟ್ಟಿನಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ.