ನವದೆಹಲಿ:ವಿಜಯ್ ಮಲ್ಯ ಮತ್ತು ಅರುಣ್ ಜೈಟ್ಲಿ ನಡುವವಿನ ಭೇಟಿ 15 ನಿಮಿಷಗಳ ಕಾಲ ನಡೆದಿದೆ, ಬೇಕಾದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ. 


COMMERCIAL BREAK
SCROLL TO CONTINUE READING

ಪಕ್ಷದ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ" ಜೈಟ್ಲಿ ಇಡಿ, ಸಿಬಿಐಗೆ ಯಾವುದೇ ಮಾಹಿತಿ ನೀಡಿಲ್ಲ. ಇದರರ್ಥವೇನು? ಜೈಟ್ಲಿಯವರು  ಮಲ್ಯ ಕ್ರಿಮಿನಲ್ ಅಪಾದನೆಯನ್ನು ಹೊಂದಿದ್ದಾಗಿಯೋ ಲಂಡನ್ ಗೆ ಹೋಗಿದ್ದೇಕೆ ಎನ್ನುವುದನ್ನು ತಿಳಿಸಬೇಕು" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.



ಇನ್ನೊಂದೆಡೆಗೆ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಪಿ.ಎಲ್ ಪುನಿಯಾ ಮಾತನಾಡಿ "ಮಾರ್ಚ್ 1 ರಂದು ಸೆಂಟ್ರಲ್ ಹಾಲ್ ನಲ್ಲಿ 15 ನಿಮಿಷಗಳ ಕಾಲ ಅರುಣ್ ಜೈಟ್ಲಿ ಮತ್ತು ವಿಜಯ್ ಮಲ್ಯ ಮಾತುಕತೆ ನಡೆಸಿದ್ದನ್ನು ನಾನು ನೋಡಿದ್ದೇನೆ. ಮಾರ್ಚ್ 3 ರಂದು ಮಾದ್ಯಮಗಳ ಮೂಲಕ ಮಾರ್ಚ್ 2ಕ್ಕೆ ದೇಶವನ್ನು ತೊರೆದ ಸುದ್ದಿಯನ್ನು ಕೇಳಿದ್ದೇವೆ.ಆದ್ದರಿಂದ ಆ ದಿನದ ಸಂಸತ್ತಿನ ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಗಳನ್ನು ಹೊರತನ್ನಿ" ಎಂದು ಪುನಿಯಾ ಆಗ್ರಹಿಸಿದ್ದಾರೆ.


ಬುಧುವಾರದಂದು ಮಲ್ಯ ಲಂಡನ್ ಗೆ ಹೊರಡುವ ಮೊದಲು ಜೈಟ್ಲಿಯವರನ್ನು ಸಂಸತನಲ್ಲಿ ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ.ಆದರೆ ಈ ಆರೋಪವನ್ನು ನಿನ್ನೆ ಜೈಟ್ಲಿ ತಳ್ಳಿಹಾಕಿದ್ದಾರೆ.