ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ನಗರ ನಕ್ಸಲ್ ಗೆ ಒಂದು ದೊಡ್ಡ ಉದಾಹರಣೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಶುಕ್ರವಾರ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಮನೋಜ್ ತಿವಾರಿ "ಕೆಲವು ನಗರ ನಕ್ಸಲರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದಾರೆ,ಇನ್ನು ಅರವಿಂದ್ ಕೇಜ್ರಿವಾಲ್ ನಗರ ನಕ್ಸಲ್ಗೆ ಒಂದು ದೊಡ್ಡ ಉದಾಹರಣೆ.ಮುಖ್ಯಮಂತ್ರಿಯಾಗಿಯೂ ಅವರು (ಕೇಜ್ರಿವಾಲ್) ರಿಪಬ್ಲಿಕ್ ಡೇ ಮೆರವಣಿಗೆಯನ್ನು ನಿಲ್ಲಿಸಲು ಧರಣಿಯಲ್ಲಿ ಕುಳಿತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ನಕ್ಸಲರನ್ನು "ಕ್ರಾಂತಿಕಾರರು" ಎಂದು ಬಣ್ಣಿಸಿರುವ ಉತ್ತರಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ಮತ್ತು ಇತ್ತೀಚಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅಲ್ಲಿನ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಂಡಿದ್ದ ನವಜೋತ್ ಸಿಂಗ್ ಸಿಧು ವಿರುದ್ದ ವಾಗ್ದಾಳಿ ನಡೆಸಿ ತಮ್ಮ ನಿಲವು ಸ್ಪಷ್ಟಪಡಿಸಬೇಕೆಂದರು.


ಕಾಂಗ್ರೆಸ್ ಮತ್ತು ಎಎಪಿ ಭಿನ್ನವಾಗಿಲ್ಲ ಅವರೆಡು ಇಕ್ ಹೈ ಥಿಲಿ ಕೆ ಚಟ್ಟೆ ಬ್ಯಾಟೆ '(ಒಂದೇ ಬ್ಲಾಕ್ ನ ಚಿಪ್ಸ್) ಇದ್ದ ಹಾಗೆ ಎಂದರು.ದೆಹಲಿಯಲ್ಲಿ ಎಎಪಿ ಕಾಂಗ್ರೆಸ್ ಪಕ್ಷದ ಬಿ ತಂಡವಾಗಿದೆ ಎಂದು ಅವರು ಹೇಳಿದರು.