ನವದೆಹಲಿ: ನಗರದಲ್ಲಿ ಮಾಲಿನ್ಯ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶಾಲಾ ವಿದ್ಯಾರ್ಥಿಗಳಿಗೆ  'ಮಾಸ್ಕ್'ಗಳನ್ನು ವಿತರಿಸಿದ್ದಾರೆ. ಪಕ್ಕದ ರಾಜ್ಯಗಳಲ್ಲಿ ಕೂಳೆ ಸುಡುವುದರಿಂದ ಉಂಟಾಗಿರುವ ಹೊಗೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಮಟ್ಟವು ಹದಗೆಟ್ಟಿದೆ, ಈ ವರ್ಷ ಅದು ದ್ವಿಗುಣಗೊಂಡಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಮಟ್ಟ ಹೆಚ್ಚಾಗುತ್ತಿದ್ದು, "ಜನರು ಉಸಿರಾಡಲು ತೊಂದರೆ ಎದುರಿಸುತ್ತಿದ್ದಾರೆ. ಮಾಲಿನ್ಯದಿಂದ ಮಕ್ಕಳಿಗೆ ತೊಂದರೆಯಾಗದಂತೆ ನಿಗಾ ವಹಿಸಲು ಖಾಸಗಿ ಮತ್ತು ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಗೂ ಎರಡು 'ಮಾಸ್ಕ್'ಗಳನ್ನು ವಿತರಿಸುತ್ತಿದ್ದೇವೆ" ಎಂದು ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುವಾಗ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.


ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ ಮತ್ತು ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯದ ಗುಣಮಟ್ಟ ಹೆಚ್ಚಿದೆ.


ದೆಹಲಿ ಮುಖ್ಯಮಂತ್ರಿ, ಉಸಿರಾಡಲು ಹೆಣಗಾಡುತ್ತಿರುವ ದೆಹಲಿಯವರಿಗೆ 50 ಲಕ್ಷಕ್ಕೂ ಹೆಚ್ಚು ಎನ್ 95 ಮುಖವಾಡಗಳನ್ನು ವಿತರಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ. "ನೆರೆಯ ರಾಜ್ಯಗಳಲ್ಲಿ ಬೆಳೆ ಸುಡುವಿಕೆಯಿಂದ ಹೊಗೆಯಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ. ಈ ವಿಷಕಾರಿ ಗಾಳಿಯಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೂಲಕ ನಾವು ಇಂದು 50 ಲಕ್ಷ ಮುಖವಾಡಗಳನ್ನು ವಿತರಿಸಲು ಪ್ರಾರಂಭಿಸಿದ್ದೇವೆ. ಅಗತ್ಯವಿದ್ದಾಗಲೆಲ್ಲಾ ಅವುಗಳನ್ನು ಬಳಸಬೇಕೆಂದು ನಾನು ದೆಹಲಿಯ ಎಲ್ಲ ಜನರನ್ನು ಕೋರುತ್ತೇನೆ"  ಎಂದು ಕೇಜ್ರೀವಾಲ್ ಟ್ವೀಟ್ ನಲ್ಲಿ ಬರೆದಿದ್ದಾರೆ.



ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯದಿಂದಾಗಿ ದೆಹಲಿಯ ಶಾಲಾ-ಕಾಲೇಜುಗಳಲ್ಲಿ ಹೊರಾಂಗಣ ಕ್ರೀಡಾಕೂಟಗಳನ್ನು ನಡೆಸದಂತೆ ದೆಹಲಿ ಸರ್ಕಾರ ಸೂಚನೆ ನೀಡಿದೆ.


ಮೂಗು ಮತ್ತು ಬಾಯಿಯನ್ನು ಆವರಿಸುವುದರಿಂದ ಮತ್ತು 95% ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡುವ ಕಾರಣ N95 'ಮಾಸ್ಕ್'ಗಳನ್ನೇ ಬಳಸುವಂತೆ ಜನರಿಗೆ ಶಿಫಾರಸು ಮಾಡಲಾಗುತ್ತಿದೆ.