ನವದೆಹಲಿ: ದೆಹಲಿ ವಾಸಿಸುವ ಮಹಿಳೆಯರಿಗೆ ಈಗ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣದ ಅವಕಾಶ ನೀಡಲು ಯೋಜನೆಯೊಂದನ್ನು ರೂಪಿಸುತ್ತಿದೆ.ಈಗ ಎಲ್ಲವು ಅಂದುಕೊಂಡಂತೆ ಆದಲ್ಲಿ ಮಹಿಳೆಯರಿಗೆ ಇದು ನಿಜಕ್ಕೂ ಬಂಪರ್ ಸುದ್ದಿ ಎನ್ನಬಹುದು.


COMMERCIAL BREAK
SCROLL TO CONTINUE READING

ಈಗ ಈ ಯೋಜನೆಯನ್ನು ಕಾರ್ಯಗತಗೊಳಿಸಲು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರು ದೆಹಲಿ ಮೆಟ್ರೊ ರೈಲ್ ಕಾರ್ಪೊರೇಷನ್ (ಡಿಎಂಆರ್ಸಿ) ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಯೋಜನೆಯಿಂದಾಗಿ ಡಿಎಂಆರ್ಸಿ ಮೇಲೆ ಆಗುವ ಪರಿಣಾಮದ ಕುರಿತಾಗಿ ಪ್ರಸ್ತಾಪವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಹೇಳಿದ್ದಾರೆ ಎನ್ನಲಾಗಿದೆ.


"ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿದೆ. ಈ ನಿರ್ಧಾರ ದೆಹಲಿ ಮೆಟ್ರೊ ರೈಲ್ವೆ ಕಾರ್ಪೊರೇಷನ್, ದೆಹಲಿ ಸಾರಿಗೆ ನಿಗಮ ಮತ್ತು ಕ್ಲಸ್ಟರ್ ಯೋಜನೆ ಬಸ್ಸುಗಳ ಮೇಲೆ ಪರಿಣಾಮ ಬಿರಬಹುದು" ಎಂದು ದೆಹಲಿ ಸರಕಾರ ಅಧಿಕಾರಿಗಳೋಬ್ಬರು ಹೇಳಿದ್ದಾರೆ.


ವರದಿಗಳ ಪ್ರಕಾರ, ಸುಮಾರು 30 ಲಕ್ಷ ಜನರು ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನು ಅಳೆಯಲು ಹೊಸ ಸಮೀಕ್ಷೆ ನಡೆಸಲಾಗದಿದ್ದಲ್ಲಿ ಆದಾಯ ನಷ್ಟವನ್ನು ನಿಖರವಾಗಿ ಲೆಕ್ಕಾಚಾರ ಮಾಡುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.