Mumbai Drugs Party Case - ಮುಂಬೈ ಡ್ರಗ್ಸ್ ಪ್ರಕರಣದಲ್ಲಿ (Cruise Drugs Party Cae) ನಿರಂತರ ತಿರುವುಗಳು ಕಂಡುಬರುತ್ತಲೇ ಇವೆ. ಇದೀಗ ಶಾರುಕ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Ayan Khan) ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳ ತನಿಖೆಯಿಂದ ಮುಂಬೈ NCB ವಲಯ ನಿರ್ದೇಶಕ  ಸಮೀರ್ ವಾಂಖೆಡೆ (Sameer Wankhede) ಅವರನ್ನು ಕೈಬಿಡಲಾಗಿದೆ. ಅಂದರೆ, NCBಯ SIT ಇದೀಗ ಈ ಪ್ರಕರಣ ಗಳ ತನಿಖೆ ನಡೆಸಲಿದೆ. 


COMMERCIAL BREAK
SCROLL TO CONTINUE READING

ಏರ್ ಇಂಡಿಯಾ ವಿಮಾನದಿಂದ ಮುಂಬೈಗೆ ತೆರಳಿದ ತಂಡ 
NCBಯ SIT ತಂಡ ಬೆಳಗ್ಗೆ. ಏರ್ ಇಂಡಿಯಾ ಫ್ಲೈಟ್ ನಿಂದ ಮುಂಬೈಗೆ ತಲುಪುತ್ತಿದೆ. ಈ ತಂಡವನ್ನು SIT ಮುಖ್ಯಸ್ಥ  ಹಾಗೂ DDG ಆಪರೇಶನ್ ಸಂಜಯ್ ಸಿಂಗ್ (NCB DDG Sanjay Singh) ಮುನ್ನಡೆಸಲಿದ್ದಾರೆ. ಅವರು ತಮ್ಮ ತಂಡದೊಂದಿಗೆ ಮುಂಬೈ ತಲುಪುತ್ತಿದ್ದಾರೆ. 


ದೇಶಾದ್ಯಂತದ ಆಯ್ದ ಅಧಿಕಾರಿಗಳ ದಂಡೆ ಮುಂಬೈ ತಲುಪುತ್ತಿದೆ. 
ಈ ಪ್ರಕರಣದ ತನಿಖೆಗಾಗಿ ದೆಹಲಿ ಮಾತ್ರವಲ್ಲದೆ, ದೇಶದ ಇತರ ರಾಜ್ಯಗಳ ಎನ್‌ಸಿಬಿ ಘಟಕಗಳ ಹಲವು  ಅಧಿಕಾರಿಗಳನ್ನು ಮುಂಬೈಗೆ ಕರೆಸಲಾಗುತ್ತಿದ್ದು, ಅವರು ಎಲ್ಲಾ 6 ಪ್ರಕರಣಗಳ ತನಿಖೆ ನಡೆಸಲಿದ್ದಾರೆ. ಈ ವಿಷಯ ಇದೀಗ ನಿರಂತರ ಸಂಚಲನ ಮೂಡಿಸುತ್ತಿದ್ದು, ಇಡೀ ದೇಶದ ಗಮನ ಸೆಳೆದಿದೆ. 


ಇದನ್ನೂ ಓದಿ- Free Ration Scheme : ಪಡಿತರದಾರರಿಗೆ ಬಿಗ್ ಶಾಕ್ : ಇಂದಿನಿಂದ ಉಚಿತ ಪಡಿತರ ಯೋಜನೆ ಬಂದ್!


ದೆಹಲಿಯಲ್ಲಿ ನಡೆಯುತ್ತಿರುವುದೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿಸೃಷ್ಟಿಯಾಗಿರುವ ಕೋಲಾಹಲದ ನಡುವೆಯೇ, ದೆಹಲಿಯಲ್ಲಿ ಕೂಡ ವಾತಾವರಣ ಕಾವೇರತೊಡಗಿದೆ. ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿಆಶೀಶ್ ರಂಜನ್ ಪ್ರಸಾದ್ ಅವರನ್ನು NCB ವಿಜಿಲೆಂಸ್ ತಂಡವು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.  ಮುಂಬೈನಲ್ಲಿ ಆಶಿಶ್ ರಂಜನ್ ಪ್ರಸಾದ್ ಹೇಳಿಕೆಯನ್ನು ದಾಖಲಿಸುವ ಮುನ್ನ NCB ವಿಜಿಲೆಂಸ್ ನಡೆಸಿರುವ ಎರಡನೇ ವಿಚಾರಣೆ ಇದಾಗಿದೆ. ಇದೆ ತಿಂಗಳ 2 ಮತ್ತು 3ರಂದು ಅವರ ವಿಚಾರಣೆ ನಡೆದಿತ್ತು. 


ಇದನ್ನೂ ಓದಿ-ವಾಯುಮಾಲಿನ್ಯದ ಹೆಚ್ಚಳದಿಂದ ಕೊರೊನಾ ಪ್ರಕರಣಗಳ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ


ಇನ್ನೊಂದೆಡೆ ಹಲವು ವೈಯಕ್ತಿಕ ಹಾಗೂ ಸೇವೆಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿರುವ ಸಮೀರ್ ವಾಂಖೆಡೆ (Sameer Wankhede) ಮುಂಬೈ NCB ವಲಯ ನಿರ್ದೇಶಕರಾಗಿ (NCB Zonal Director) ಮುಂದುವರೆಯಲಿದಾರೆ. ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು ಕ್ರೂಸ್ ಡ್ರಗ್ಸ್ ಪಾರ್ಟಿ ಸೇರಿದಂತೆ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ (Nawab Malik) ಅಳಿಯನ ಪ್ರಕರಣವನ್ನು ಕೂಡ SITಗೆ (NCB SIT)ವಹಿಸಲಾಗಿದೆ. ಆದರೆ ರಿಯಾ ಚಕ್ರವರ್ತಿಯ (Rhea Chakraborty) 2020ರ ಡ್ರಗ್ಸ್ ಪ್ರಕರಣವನ್ನು ಕೂಡ ಮುಂಬೈ NCB ಕಡೆಯಿಂದ ತೆಗೆದುಕೊಳ್ಳಲಾಗಿದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಪ್ರಕರಣದ ತನಿಖೆಯ ವೇಳೆ NCBಗೆ ಕೆಲವು ಸಂಗತಿಗಳು ದೊರೆತಿರುವುದೇ ಮುಂಬೈ ತಂಡದಿಂದ ಈ ಪ್ರಕರಣವನ್ನು ವರ್ಗಾಯಿಸುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 


ಇದನ್ನೂ ಓದಿ-ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದೆ WhatsApp ವೆಬ್ ಅನ್ನು ಬಳಸುವುದು ಹೇಗೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ