ನವದೆಹಲಿ: ಕೇಂದ್ರ ಸರಕಾರವು ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಸಂವಹನ ಸಾಧನಗಳ ಮೇಲೆ ಆಮದು ತೆರಿಗೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಈ ನಿರ್ಧಾರದಿಂದ ಇನ್ನು ಮುಂದೆ ನಿಮ್ಮ ಮೊಬೈಲ್ ಗೆ ಹಾಗೂ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಳ್ಳುವ ಆಸೆಗೆ ಹೊಡೆತ ಬಿಳಲಿದೆ.


COMMERCIAL BREAK
SCROLL TO CONTINUE READING

ಇಂತಹ ವಸ್ತುಗಳನ್ನು ಅಗತ್ಯವಿಲ್ಲದ ವಸ್ತುಗಳು ಎಂದು ವಿಂಗಡಿಸಿ ಅದರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುವ ನಿರ್ಧಾರವನ್ನು ಕೈಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಮೂಲಕ ಕೇವಲ ಎರಡು ವಾರದ ಒಳಗೆ ಸರ್ಕಾರ ಎರಡನೇ ಬಾರಿಗೆ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.


ಯಾವ ಯಾವ ವಸ್ತುಗಳ ಮೇಲೆ ಎಷ್ಟು ಪ್ರಮಾಣದ ತೆರಿಗೆಯನ್ನು ಸರ್ಕಾರ ಹೆಚ್ಚಿಸಲಿದೆ ಎನ್ನುವುದರ ಕುರಿತಾಗಿ ಇನ್ನು ತಿಳಿದು ಬಂದಿಲ್ಲ  ಎನ್ನಲಾಗಿದೆ.ಈ ತೆರಿಗೆ ಹೆಚ್ಚಳ ಪ್ರಮುಖವಾಗಿ ಚೀನಾ ಮತ್ತು  ಅಮೆರಿಕಾದ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ದದ ಹಿನ್ನಲೆಯಲ್ಲಿ ಬಂದಿದೆ.


ಶುಕ್ರವಾರದಿಂದಲೇ ಈ ಪ್ಲಾನ್ ಜಾರಿಗೆ ಬರಲಿದ್ದು ಆ ಮೂಲಕ ಈ ಯೋಜನೆಯಿಂದಾಗಿ ರಿಲಯನ್ಸ್ ಜಿಯೋ, ಇನ್ಫೋ ಕಾಂ, ಭಾರ್ತಿ ಏರ್ಟೆಲ್,ಹಾಗೂ ಐಡಿಯಾಗಳಿಗೆ ಕೂಡ  ಹೊಡೆತ ಬಿಳಲಿದೆ ಎನ್ನಲಾಗಿದೆ.