ದೇಶದ ಈ ಸ್ಥಳದಲ್ಲಿ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ತೆರಿಗೆ ಪಾವತಿಸಬೇಕಿತ್ತಂತೆ!
General knowledge: ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಆಕ್ಷೇಪಾರ್ಹ ಸಂಪ್ರದಾಯಗಳು.. ಕಾನೂನುಗಳು ಜಾರಿಯಲ್ಲಿದ್ದವು.. ಅಂತದ್ದೇ ವಿಚಿತ್ರ ನಿಯಮವೆಂದರೆ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ತೆರಿಗೆ ಕಟ್ಟಬೇಕೆಂಬುದು.. ಹಾಗಾದರೆ ಈ ಆಕ್ಷೇಪಾರ್ಹ ಕಾನೂನನ್ನು ಯಾವ ರಾಜನು ಜಾರಿಗೆ ತಂದನು? ದೇಶದ ಯಾವ ಸ್ಥಳದಲ್ಲಿ ಇದು ಆಚರಣೆಯಲ್ಲಿತ್ತು ಎಂಬುದನ್ನು ಇದೀಗ ತಿಳಿಯೋಣ..
Objectionable law: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಅನೇಕ ನೀತಿ, ನಿಯಮಗಳು ಜನರಿಂದ ವಿರೋಧಿಸಲ್ಪಟ್ಟಿದ್ದವು.. ಇದೀಗ ನಾವು ನಿಮಗೆ ಸಂಪೂರ್ಣ ಆಕ್ಷೇಪಾರ್ಹ ಕಾನೂನಿನ ಬಗ್ಗೆ ಹೇಳಲಿದ್ದೇವೆ.. ವಾಸ್ತವಾಗಿ ಈ ಕಾನೂನಿನ ಅಡಿಯಲ್ಲಿ, ಕೆಳಜಾತಿಯ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ತೆರಿಗೆಯನ್ನು ಪಾವತಿಸಬೇಕಾಗಿತ್ತಂತೆ.. ಅಷ್ಟೇ ಅಲ್ಲ, ಮಹಿಳೆಯರು ಈ ಕಾನೂನಿಗೆ ವಿರೋಧವಾಗಿ ನಡೆದುಕೊಂಡರೆ ಶಿಕ್ಷೆಯೂ ಆಗುತ್ತಿತ್ತು..
ಈ ನಿಯಮ ಎಲ್ಲಿ ಜಾರಿಯಲ್ಲಿತ್ತು:
ಕೇರಳದ ತಿರುವಾಂಕೂರಿನಲ್ಲಿ ಕೆಳವರ್ಗದ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ತೆರಿಗೆ ಪಾವತಿಸಬೇಕಾಗಿತ್ತು.. ಮಹಿಳೆಯರ ಮುಂದೆ ಯಾವುದೇ ಅಧಿಕಾರಿ ಅಥವಾ ಬ್ರಾಹ್ಮಣ ಬಂದರೆ, ಆಕೆ ತನ್ನ ಎದೆಯಿಂದ ತನ್ನ ಬಟ್ಟೆಗಳನ್ನು ತೆಗೆಯಬೇಕಾಗಿತ್ತು. ಅಲ್ಲದೇ ಎದೆಯನ್ನು ಮುಚ್ಚಿದ್ದಕ್ಕೆ ಪ್ರತಿಯಾಗಿ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ಈ ನಿಯಮವನ್ನು ಪಾಲಿಸಬೇಕಾಗಿತ್ತು..
ಇದನ್ನು ಓದಿ : GK Quiz: ಯಾವ ಆಂಜನೇಯನ ದೇವಸ್ಥಾನದಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ
ವರದಿಯ ಪ್ರಕಾರ, ಕೇರಳದಲ್ಲಿ ಕೆಳ ಜಾತಿಯ ಮಹಿಳೆಯರಿಗೆ ಮಾತ್ರ ಕಠಿಣ ನಿಯಮಗಳನ್ನು ಮಾಡಲಾಗಿದ್ದು.. ಅದರ ಪ್ರಕಾರ ಮಹಿಳೆ ತನ್ನ ಎದೆಯನ್ನು ಮುಚ್ಚಿದರೆ, ಆಕೆ ಸ್ತನದ ಗಾತ್ರದ ಮೇಲೆ ತೆರಿಗೆ ಪಾವತಿಸಬೇಕಾಗಿತ್ತು. ಈ ಆಕ್ಷೇಪಾರ್ಹ ನಿಯಮಗಳು ಮತ್ತು ತೆರಿಗೆಗಳು ತಿರುವಾಂಕೂರ್ ರಾಜನ ಆಡಳಿತದಲ್ಲಿದ್ದವು..
ಇದನ್ನು ಓದಿ : GK Quiz: ಯಾವ ಆಂಜನೇಯನ ದೇವಸ್ಥಾನದಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ?
ಇತಿಹಾಸದ ಕರಾಳ ಅಧ್ಯಾಯ:
ಮಾಹಿತಿಯ ಪ್ರಕಾರ ಕೇರಳದ ಇತಿಹಾಸದ ಪುಟಗಳಲ್ಲಿ ಅಡಗಿರುವ ಈ ಕಥೆ ಸುಮಾರು ನೂರೈವತ್ತು ವರ್ಷಗಳಷ್ಟು ಹಳೆಯದು. ಲೇಖಕ ದಿವಾನ್ ಜರ್ಮನಿ ದಾಸ್ ಅವರು ತಮ್ಮ ಮಹಾರಾಣಿ ಪುಸ್ತಕದಲ್ಲಿ ತಿರುವಾಂಕೂರಿನ ಆಳ್ವಿಕೆಯು ಕೇರಳದ ಭೂಪ್ರದೇಶದಲ್ಲಿ ಹರಡಿತ್ತು ಎಂದು ಉಲ್ಲೇಖಿಸಿದ್ದಾರೆ.
ಈ ಕಾನೂನು ಹೇಗೆ ಕೊನೆಗೊಂಡಿತು?
ಬ್ರಿಟಿಷ್ ಗವರ್ನರ್ ಚಾರ್ಲ್ಸ್ ಟ್ರೆವೆಲಿಯನ್ 1859 ರಲ್ಲಿ ಈ ಆಕ್ಷೇಪಾರ್ಹ ನಿಯಮವನ್ನು ರದ್ದುಗೊಳಿಸಲು ಆದೇಶಿಸಿದರು. ನಂತರ ಮೇಲ್ವರ್ಗದ ಹಿಂದೂ ಮಹಿಳೆಯರ ಬಟ್ಟೆ ಶೈಲಿಯನ್ನೇ ಹೊಂದುವಂತೆ ಕೆಳವರ್ಗದ ಮಹಿಳೆಯರ ಉಡುಪಿನ ವ್ಯವಸ್ಥೆ ಮಾಡಲಾಯಿತು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.