ಗೋರಖ್‌ಪುರ: ಲೋಕಸಭಾ ಚುನಾವಣೆ 2019ರ ರಾಜಕೀಯ ಸಮರ ಕಡೆಯ ಹಂತಕ್ಕೆ ತಲುಪಿದ್ದು, ಮೇ 19ರಂದು 8 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ ಅಂತಿಮ ಹಂತದಲ್ಲಿ ಮತದಾನ ನಡೆಯಲಿದೆ. ಏತನ್ಮಧ್ಯೆ, ಸುದ್ದಿ ಸಂಸ್ಥೆ ಪಿಟಿಐಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂದರ್ಶನ ನೀಡಿದ್ದು, ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರ ಭವಿಷ್ಯವಾಣಿಯಂತೆ ಬಡವರಿಗಾಗಿ ಕೆಲಸ ಮಾಡುವ, ಆದ್ಯತೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶವನ್ನು ಇನ್ನೂ 25 ವರ್ಷಗಳ ಕಾಲ ಆಳುತ್ತಾರೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬಡಜನರಿಗೆ ಶೌಚಾಲಯ ಮತ್ತು ಇಂಧನ ಅವಶ್ಯಕತೆ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿ ಅವರು ಮತ್ತಷ್ಟು ವರ್ಷ ದೇಶದ ಆಡಳಿತ ನಡೆಸಲಿದ್ದಾರೆ ಎಂದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದಲ್ಲಿನ 80 ಸ್ಥಾನಗಳ ಪೈಕಿ ಬಿಜೆಪಿ 74 ಸ್ಥಾನಗಳನ್ನುಗೆಲ್ಲಲಿದೆ. 2014ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆದ್ದಿದ್ದ ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನಗಳನ್ನು ಈ ಬಾರಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


"ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ -'ದೇಶದ ಪ್ರತಿಯೋರ್ವ ಬಡವ ತನ್ನ ಮನೆಗೆ ಯಾವ ದಿನ ಶೌಚಾಲಯ ಹೊಂದುತ್ತಾನೋ ಮತ್ತು ಆತನ ಇಂಧನ ಅಗತ್ಯವನ್ನು ಯಾವಾಗ ಪೂರೈಸಲಾಗುವುದೋ ಆಗ ಯಾರೇ ಪ್ರಧಾನಿಯಾಗಿರಲಿ ಅವರು ಈ ದೇಶವನ್ನು ಕನಿಷ್ಠ 25 ವರ್ಷಗಳ ಕಾಲ ಆಳುತ್ತಾರೆ' ಎಂದು ಲೋಕಸಭೆಯಲ್ಲಿ ಹೇಳಿದ್ದರು. ಡಾ. ಲೋಹಿಯಾ ಅವರ ಕನಸು ಪ್ರಧಾನಿ ನರೇಂದ್ರ ಮೋದಿ ಅವರಿಂದ ನನಸಾಗಿದೆ. ಹಾಗಾಗಿ 201ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಗಳಿಸಿ ಸರ್ಕಾರ ರಚಿಸಲಿದೆ" ಎಂದು ಆದಿತ್ಯನಾಥ್‌ ಹೇಳಿದ್ದಾರೆ.