List of Hindu temples in Tamil Nadu: ಭಾರತ... ಸರ್ವಧರ್ಮಗಳ ನೆಲೆಬೀಡು. ವಿಶ್ವದ ಪ್ರಮುಖ ಧರ್ಮಗಳು, ಸ್ಥಳೀಯ ನಂಬಿಕೆಗಳು ಮತ್ತು ಬುಡಕಟ್ಟು ಸಂಪ್ರದಾಯಗಳು ಸೇರಿದಂತೆ ಹಲವು ಧರ್ಮಗಳಿಗೆ ನೆಲೆಯಾಗಿರುವ ಏಕೈಕ ರಾಷ್ಟ್ರ ಎಂದರೂ ತಪ್ಪಿಲ್ಲ. 2011 ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯ 79.8% ಹಿಂದೂ ಧರ್ಮ, 14.2% ಇಸ್ಲಾಂ, 2.3% ಕ್ರಿಶ್ಚಿಯನ್ ಧರ್ಮ, 1.7% ಸಿಖ್ ಧರ್ಮ, 0.7% ಬೌದ್ಧಧರ್ಮ ಮತ್ತು 0.4% ಜೈನ ಧರ್ಮವನ್ನು ಅನುಸರಿಸುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭವ್ಯ ಬಂಗಲೆ.. ಐಷಾರಾಮಿ ಕಾರು, ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?


ತಮಿಳುನಾಡಿನಲ್ಲಿ ಅನೇಕ ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ಈ ರಾಜ್ಯವನ್ನು ದೇವಾಲಯಗಳ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿ ಸುಮಾರು 33,000 ಪ್ರಾಚೀನ ದೇವಾಲಯಗಳಿದ್ದು, ಅವೆಲ್ಲವೂ 800 ರಿಂದ 3500 ವರ್ಷಗಳಷ್ಟು ಹಳೆಯವು ಎಂದು ಕಾಲಾನುಕ್ರಮದಲ್ಲಿ ಹೇಳಲಾಗಿದೆ. ಈ ರಾಜ್ಯವು ಹೆಚ್ಚಾಗಿ ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ.


ಈ ದೇವಾಲಯಗಳ ವಿಶಿಷ್ಟ ಲಕ್ಷಣಗಳು ಅವುಗಳ ಭವ್ಯವಾದ ಶಿಲ್ಪಗಳು ಮತ್ತು ವೈವಿಧ್ಯಮಯ ವಾಸ್ತುಶಿಲ್ಪಗಳಾಗಿವೆ. ಇವುಗಳಲ್ಲಿ ಕಂಡುಬರುವ ಶಾಸನಗಳ ಮೂಲಕ ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಚೆನ್ನಾಗೊ ಅರ್ಥೈಸಿಕೊಳ್ಳಬಹುದು. ಇಲ್ಲಿ ಕಂಡುಬರುವ ಶಾಸನಗಳು ಸುಮಾರು 3,000 ವರ್ಷಗಳಷ್ಟು ಹಳೆಯವು. ಈ ದೇವಾಲಯಗಳು ತಮಿಳುನಾಡಿನ ಸಾಂಸ್ಕೃತಿಕ ಪ್ರತಿಮೆಗಳಾಗಿ ಎದ್ದು ಕಾಣುತ್ತವೆ. ಇಲ್ಲಿರುವ ಸುಮಾರು 1,586 ದೇವಾಲಯಗಳಲ್ಲಿ 2,359 ಕೋನಾರ್‌ ದೇವಾಲಯಗಳಿವೆ. ತಮಿಳುನಾಡು ಸರ್ಕಾರವು ಈ ಶಿಥಿಲಗೊಂಡ ಕೋನರ್‌ಗಳಲ್ಲಿ ಸುಮಾರು 1,086 ಅನ್ನು ಪುನಃಸ್ಥಾಪಿಸಲು ನಿರ್ಧರಿಸಿದೆ.


ತಮಿಳುನಾಡಿನಲ್ಲಿರುವ ದೇವಾಲಯಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ


  • ಸಂಗಮ್ ಕಾಲದ ದೇವಾಲಯಗಳು

  • ಪದ್ಯಗಳಲ್ಲಿ ವಿವರಿಸಲ್ಪಟ್ಟ ದೇವಾಲಯ

  • ಗದ್ಯ ಪ್ರಬಂಧದಲ್ಲಿ ಉಲ್ಲೇಖಿಸಲಾದ ದೇವಾಲಯಗಳು

  •  ಪಲ್ಲವ ಕಾಲದ ಗುಹಾ ದೇವಾಲಯಗಳು

  • ಪಾಂಡ್ಯರ ಕಾಲದ ಗುಹಾ ದೇವಾಲಯಗಳು

  • ಪಲ್ಲವರು ನಿರ್ಮಿಸಿದ ಏಕಶಿಲೆಯ ಕಲ್ಲಿನ ದೇವಾಲಯಗಳು

  • ಪಾಂಡ್ಯ ರಾಜರು ನಿರ್ಮಿಸಿದ ಏಕಶಿಲೆಯ ಕಲ್ಲಿನ ದೇವಾಲಯಗಳು

  • ಪಲ್ಲವ ಕಾಲದ ರಚನಾತ್ಮಕ ದೇವಾಲಯಗಳು

  • ಪಾಂಡ್ಯರು ನಿರ್ಮಿಸಿದ ವ್ಯವಸ್ಥಿತ ದೇವಾಲಯಗಳು

  • ಚೋಳರು ನಿರ್ಮಿಸಿದ ಸಂಘಟಿತ ದೇವಾಲಯಗಳು

  • ವಿಜಯನಗರ/ನಾಯಕ ರಾಜರು ನಿರ್ಮಿಸಿದ ವ್ಯವಸ್ಥಿತ ದೇವಾಲಯಗಳು

  • ಅಯ್ಯನರಪ್ಪನ್ ದೇವಾಲಯಗಳು, ಇತ್ಯಾದಿ


ಇದನ್ನೂ ಓದಿ: ಹನಿ ತುಪ್ಪ ಕಣ್ಣಿನ ಸುತ್ತ ಸವರಿದ್ರೆ ಸಿಗುತ್ತೆ ಇಷ್ಟೆಲ್ಲಾ ಅದ್ಭುತ ಪ್ರಯೋಜನಗಳು..!


ಇನ್ನು ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯವೆಂದು ತಮಿಳುನಾಡನ್ನು ಕರೆಯಲಾಗುತ್ತದೆ. ಇಲ್ಲಿ ಸರಿಸುಮಾರು 400,000 ಕ್ಕೂ ಹೆಚ್ಚು ಹಿಂದೂ ದೇವಾಲಯಗಳಿಗೆವೆ ಎನ್ನಲಾಗಿದೆ. ತಮಿಳುನಾಡು ಹಿಂದೂ ದತ್ತಿ ಮಂಡಳಿಯ ಪ್ರಕಾರ, 390,615 ದೇವಾಲಯಗಳಿವೆ. ಸಂಕೀರ್ಣ ವಾಸ್ತುಶಿಲ್ಪ, ವೈವಿಧ್ಯಮಯ ಶಿಲ್ಪಗಳು ಮತ್ತು ಶ್ರೀಮಂತ ಶಾಸನಗಳಿಂದ ಕೂಡಿದ ಈ ದೇವಾಲಯಗಳು ತಮಿಳು ನೆಲದ ಸಂಸ್ಕೃತಿ ಮತ್ತು ಪರಂಪರೆಯ ಮೂಲತತ್ವವಾಗಿ ಉಳಿದಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ