ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದೆನ್ನುವ ತಿರ್ಮಾನಕ್ಕೆ  ಅಸಾದುದ್ದೀನ್ ಒವೈಸಿ ನೇತೃತ್ವದ ಎಐಐಎಂಐಎಂ ಪಕ್ಷ  ನಿರ್ಧರಿಸಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಸುದ್ದಿಮೂಲಗಳ ವರದಿಯ ಅನ್ವಯ ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ  ಕಾಂಗ್ರೆಸ್ ಪಕ್ಷದ  ಮತಗಳ  ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಪಕ್ಷದ ಭಾವಿಸಿದೆ.


ಈ ವರ್ಷ ಜನವರಿಯಲ್ಲಿ, ಎಐಐಎಂಐಎಂ ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಯೋಜನೆಯನ್ನು ರೂಪಿಸಿತ್ತು, ಆದರೆ ಈಗ ಅದು ಈ ನಿರ್ಧಾರದಿಂದ ಹಿಂದೆ ಸರಿಯುತ್ತಿದೆ ಎನ್ನಲಾಗುತ್ತಿದೆ.


ಈ ಹಿಂದೆ ಅಸಾದುದ್ದೀನ್ ಓವೈಸಿಯವರು ಬಿಜೆಪಿ ಮತ್ತು  ಕಾಂಗ್ರೆಸ್ ಹೊರತಾದ ತೃತೀಯ ರಂಗದ ಕುರಿತಾಗಿ ಪ್ರಸ್ತಾವನೆಯ ಕುರಿತಾಗಿ ಮಾತನಾಡಿದ್ದರು. 


ಕರ್ನಾಟಕದಲ್ಲಿ ಮೇ 12 ರಂದು ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೆ ಚುನಾವಣೆಗೆ ನಡೆಯಲಿದೆ.