ನವದೆಹಲಿ:  Cyclone Asani : ಕಳೆದ ಕೆಲವು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅಸಾನಿ ಚಂಡಮಾರುತ (Asani Cyclone)ಅಪ್ಪಳಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಆಡಳಿತವು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಶಾಲಾ-ಕಾಲೇಜುಗಳನ್ನು ಮಾರ್ಚ್ 21 ಅಂದರೆ ಇಂದಿನಿಂದ ಮುಚ್ಚಲಾಗಿದೆ. ದ್ವೀಪದ ಕೆಲವು ಭಾಗಗಳಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಭಾರೀ ಮಳೆ ಪ್ರಾರಂಭವಾಗಿದೆ (Heavy rain). ಫೋರ್‌ಶೋರ್ ಸೆಕ್ಟರ್‌ನಲ್ಲಿ ನಿಗದಿತ  ಎಲ್ಲಾ  ನೌಕಾಯಾನವನ್ನು ರದ್ದುಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

'ಅಸಾನಿ' ಚಂಡಮಾರುತವು (Asani Cyclone) ಅಂಡಮಾನ್ ದ್ವೀಪಗಳಿಂದ ಮ್ಯಾನ್ಮಾರ್ ಮತ್ತು ದಕ್ಷಿಣ ಬಾಂಗ್ಲಾದೇಶ ಕರಾವಳಿಯ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಭಾನುವಾರ ಹೇಳಿದ್ದಾರೆ. IMD ಪ್ರಕಾರ, ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯು ಭಾರ ಕುಸಿತವಾಗಿದ್ದು, ಮಾರ್ಚ್ 21 ರ ವೇಳೆಗೆ 70 ರಿಂದ 80 ಕಿಮೀ ವೇಗದಲ್ಲಿ ಚಂಡಮಾರುತ ಚಲಿಸುವ ಸಾಧ್ಯತೆಯಿದೆ. ನಂತರ ಇದರ ವೇಗ ಗಂಟೆಗೆ 90 ಕಿಮೀ ವರೆಗೆ ಹೆಚ್ಚಾಗಬಹುದು.


ಇದನ್ನೂ ಓದಿ:  SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಲಾಭ! ಇಂದೇ ಈ ಕೆಲಸ ಮಾಡಿ


 ಸಕ್ರಿಯವಾಗಿವೆ NDRF ತಂಡಗಳು :
ಏತನ್ಮಧ್ಯೆ, ಎನ್‌ಡಿಆರ್‌ಎಫ್ ತಂಡಗಳು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿದ್ದಿರುವ ಮರಗಳನ್ನು ತೆಗೆದುಹಾಕಿವೆ. ಆ ಪ್ರದೇಶಗಳಲ್ಲಿ ವಾಸಿಸುವ ಜನರಿಗೂ ಮುನ್ನೆಚ್ಚರಿಕೆ ನೀಡಲಾಗಿದೆ.  ಮಾರ್ಚ್ 18 ರಂದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ನಾಲ್ಕು ಬೆಟಾಲಿಯನ್‌ಗಳ ಐದು ತಂಡಗಳನ್ನು ಅರಕ್ಕೋಣಂ ಬೇಸ್‌ನಲ್ಲಿ ಪೋರ್ಟ್ ಬ್ಲೇರ್‌ಗೆ ಏರ್ ಲಿಫ್ಟ್ ಮಾಡಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಸಾಧನಗಳೊಂದಿಗೆ  NDRF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 


ಚಂಡಮಾರುತದ ಭಯ :
IMD ಹೊರಡಿಸಿದ ವಿಶೇಷ ಬುಲೆಟಿನ್ ಪ್ರಕಾರ,  ಮುಂದಿನ 12 ಗಂಟೆಗಳಲ್ಲಿ  ಚಂಡಮಾರುತಡ ವೇಗ ತೀವ್ರಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.  ಚಂಡಮಾರುತದ ಹಿನ್ನೆಲೆಯಲ್ಲಿ ಇನ್ನು ಕೆಲವು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್‌ಗೆ ಎಚ್ಚರಿಕೆ ನೀಡಲಾಗಿದೆ. ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 03192-245555/232714 ಅಥವಾ ಟೋಲ್ ಫ್ರೀ ಸಂಖ್ಯೆ 1-800-345-2714 ರಿಂದ ನವೀಕರಣಗಳನ್ನು ಪಡೆಯಲು ಸೂಚಿಸಲಾಗಿದೆ. 


ಇದನ್ನೂ ಓದಿ:  ಕೇಂದ್ರ ಸರ್ಕಾರದಿಂದ 'PM ಆವಾಸ್ ಯೋಜನೆ'ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.