ಲಾಲು ಪ್ರಸಾದ್ ಆರೋಗ್ಯ ವಿಚಾರಿಸಿದ ಅಶೋಕ ಗೆಹ್ಲೋಟ್
ಪಾಟ್ನಾ: ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಗುರುವಾರದಂದು ಆರ್ಜೆಡಿ ನಾಯಕ ಲಾಲು ಪ್ರಸಾದ್ ಅವರನ್ನು ಪಟ್ನಾದ ನಿವಾಸದಲ್ಲಿ ಭೇಟಿ ನೀಡಿದ್ದಾರೆ.
ತನ್ನ ಹಿರಿಯ ಪುತ್ರ ತೇಜ್ ಪ್ರತಾಪ್ ಅವರ ಮದುವೆಗೆ ಹಾಜರಾಗಲು ಮೇ ತಿಂಗಳಲ್ಲಿ ಪೆರೋಲ್ನಿಂದ ಹೊರಗುಳಿದ ಲಾಲು, ಈಗ ಆರೋಗ್ಯದ ಆಧಾರದ ಮೇಲೆ ಆರು ವಾರದ ಜಾಮೀನು ರಜೆ ಹೊಂದಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಲಾಲು ಪ್ರಸಾದ್,ಇತ್ತೀಚೆಗೆ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದರು.
ಲಾಲು ಪ್ರಸಾದ್ ಅವರೊಂದಿಗಿನ ಭೇಟಿಯ ನಂತರ ಗೆಹ್ಲೋಟ್ ಭೇಟಿ ಚಿತ್ರವನ್ನು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದಾರೆ.ಮಾಜಿ ಬಿಹಾರ ಮುಖ್ಯಮಂತ್ರಿ, ಲೇಟ್ ಸತ್ಯೇಂದ್ರ ನಾರಾಯಣ್ ಸಿನ್ಹಾ ಅವರ 100 ನೇ ಜನ್ಮ ವಾರ್ಷಿಕೋತ್ಸವದಲ್ಲಿ ಹಾಜರಾಗಲು ಪಾಟ್ನಾಗೆ ಆಗಮಿಸಿರುವ ಗೆಹ್ಲೋಟ್ ಗುರುವಾರದಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು.
2015 ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಆರ್ಜೆಡಿ ಮತ್ತು ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಮಹಾಮೈತ್ರಿಯ ಭಾಗವಾಗಿತ್ತು. ಇದರಲ್ಲಿ ಆರ್ಜೆಡಿ 80 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಜೆಡಿಯು 71 ಮತ್ತು ಕಾಂಗ್ರೆಸ್ 27 ಸ್ಥಾನ ಗಳಿಸಿತ್ತು. ಆದರೆ ನಿತೀಶ್ ಕುಮಾರ್ ಮಹಾಮೈತ್ರಿಯಿಂದ ಹೊರಬಂದ ನಂತರ, ಆರ್ಜೆಡಿ ಮತ್ತು ಕಾಂಗ್ರೆಸ್ ಈಗ 2019 ರ ಸಾರ್ವತ್ರಿಕ ಚುನಾವಣೆಗಳ ರಾಷ್ಟ್ರೀಯ ಮಟ್ಟದಲ್ಲಿನ ಒಕ್ಕೂಟಕ್ಕಾಗಿ ಕೆಲಸ ಮಾಡುತ್ತಿವೆ.