Bullet Train : ಭಾರತದಲ್ಲಿ ರೈಲ್ವೆ ವಲಯದಲ್ಲಿ ದೊಡ್ಡ ದೊಡ್ಡ ಅಭಿವೃದ್ಧಿಗಳು ಆಗುತ್ತಲಿದ್ದು,  ವಂದೇ ಭಾರತ್‌ ರೈಲು ಭಾರೀ ಪ್ರಸಿದ್ಧಿ ಪಡೆದಿದೆ ಮತ್ತು ಇದೀಗ ಬಹುನಿರೀಕ್ಷಿತ ಬುಲೆಟ್‌ ರೈಲು ಸೇವೆ ಆರಂಭದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು  ಅಶ್ವಿನಿ ವೈಷ್ಣವ್‌ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ಮೊದಲ ಬುಲೆಟ್ ರೈಲು 2026ರಲ್ಲಿ ಸಿದ್ಧವಾಗಲಿದ್ದು, ಅಹಮದಾಬಾದ್-ಮುಂಬೈ ನಡುವೆ 2026ರ ವೇಳೆಗೆ ದೇಶದ ಮೊದಲ ಬುಲೆಟ್ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದರು. ಸೂರತ್‌ನಿಂದ ಒಂದು ವಿಭಾಗದಲ್ಲಿ ಓಡಲಿದೆ ಎಂದು ರೈಸಿಂಗ್ ಭಾರತ್ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  ಹೇಳಿದರು.


ಇದನ್ನು ಓದಿ : ಬೈಯಪ್ಪನಹಳ್ಳಿ 'ಮೆಟ್ರೋ' ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ತೊಂದರೆ


ಈ ರೈಲು ಮುಂಬೈನಿಂದ-ಅಹಮದಾಬಾದ್‌ಗೆ ಸಂಚರಿಸಲಿದ್ದು, ಮುಂಬೈ, ಥಾಣೆ, ವಾಪಿ, ಸೂರತ್, ವಡೋದರಾ, ಆನಂದ್ ಮತ್ತು ಅಹಮದಾಬಾದ್ ನಗರಗಳ ಜನರು ಈ ಮಾರ್ಗದಲ್ಲಿ ಪ್ರಯಾಣ ಮಾಡಲು ಸಾಧ್ಯ ಆಗುತ್ತದೆ. ಈ ಎಲ್ಲಾ ನಗರಗಳ ಆರ್ಥಿಕತೆಯನ್ನು ಒಂದೇ ವಲಯಕ್ಕೆ ಜೋಡಿಸಲಾಗುತ್ತದೆ.


ಭಾರತೀಯ ರೈಲ್ವೇಯಲ್ಲಿ ಆಗುತ್ತಿರುವ ಬದಲಾವಣೆಗಳತ್ತ ಗಮನಸೆಳೆದ ರೈಲ್ವೆ ಸಚಿವರು, ಮೋದಿ ಸರ್ಕಾರದ ಬಹುದೊಡ್ಡ ಉದ್ದೇಶ ಪ್ರಯಾಣಿಕರ ಸುರಕ್ಷತೆಯಾಗಿದೆ ಎಂದು ಹೇಳಿದರು. ಮೊದಲ ಗುರಿ ಸುರಕ್ಷಿತ ಪ್ರಯಾಣ ಮತ್ತು ನಂತರ ಸೌಲಭ್ಯಗಳ ವಿಸ್ತರಣೆ ಮಾಡಲಾಗುತ್ತದೆ. 284 ಕಿಲೋ ಮೀಟರ್ ಬುಲೆಟ್ ಟ್ರೈನ್ ಟ್ರ್ಯಾಕ್ ಕಾಮಗಾರಿ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.


ಇದನ್ನು ಓದಿ : Kantara Chapter 1: ಚಿತ್ರೀಕರಣಕ್ಕೂ ಮುನ್ನವೇ ಕಾಂತಾರ ಪ್ರೀಕ್ವೆಲ್‌ ಒಟಿಟಿಗೆ ಮಾರಾಟ!


ಬುಲೆಟ್ ರೈಲು ಆರಂಭವಾದ ನಂತರ ಇದು ದೇಶದ ಪ್ರಬಲ ಆರ್ಥಿಕ ವಲಯ ಆಗಲಿದ್ದು, ಬುಲೆಟ್ ರೈಲು ಆರಂಭವಾದ ನಂತರ ಇದು ದೇಶದ ಪ್ರಬಲ ಆರ್ಥಿಕ ವಲಯ ಆಗಲಿದೆ ಎಂದು ರೈಲ್ವೆ ಸಚಿವರು ಹೇಳಿದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.