Coronavirus ವಿರುದ್ಧದ ಹೋರಾಟಕ್ಕೆ ಭಾರತಕ್ಕೆ 16700 ಕೋಟಿ ರೂ. ಸಹಾಯ ಘೋಷಿಸಿದ ADB
ಕರೋನಾ ವಿರುದ್ಧದ ಹೋರಾಟಕ್ಕಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಭಾರತಕ್ಕೆ 2.2 ಅರಬ್ ಡಾಲರ್ ಪ್ಯಾಕೇಜ್ ನೀಡಲಿದೆ. ಈ ಕುರಿತು ಬ್ಯಾಂಕಿನ ಅಧ್ಯಕ್ಷ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ.
ಕರೋನಾ ವಿರುದ್ಧದ ಯುದ್ಧದಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಭಾರತಕ್ಕೆ ತನ್ನ ಸಹಾಯವನ್ನು ಘೋಷಿಸಿದೆ. ಎಡಿಬಿ ಅಧ್ಯಕ್ಷ ಮಸತ್ಸುಗು ಅಸಕಾವಾ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಈ ವೇಳೆ ಅಸಕಾವಾ ಎಡಿಬಿಯಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವ ಭರವಸೆ ನೀಡಿದ್ದಾರೆ. ಭಾರತಕ್ಕೆ 2.2 ಅರಬ್ ಡಾಲರ್ (ಅಂದರೆ ಸುಮಾರು 16,700 ಕೋಟಿ ರೂ.) ಪ್ಯಾಕೇಜ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷರು ತಿಳಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ADB ಬ್ಯಾಂಕ್ ನ ಗವರ್ನರ್ ಆಗಿರುವುದು ಇಲ್ಲಿ ಗಮನಾರ್ಹ.
ಭಾರತ ಕೈಗೊಂಡ ಕ್ರಮವನ್ನು ಶ್ಲಾಘಿಸಿದ ADB
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಅಸಾಕವಾ , ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಇವುಗಳಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಕಾರ್ಯಕ್ರಮ ಮತ್ತು ವ್ಯಾಪಾರ ಜಗತ್ತಿಗೆ ತೆರಿಗೆ ವಿನಾಯಿತಿ ಮತ್ತು ಇತರೆ ಪರಿಹಾರ ಕ್ರಮಗಳು ಶಾಮೀಲಾಗಿವೆ. ಮೂರು ವಾರಗಳ ಲಾಕ್‌ಡೌನ್‌ನಿಂದ ಬಳಲುತ್ತಿರುವ ಬಡವರು, ಮಹಿಳೆಯರು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಮಾರ್ಚ್ 26 ರಂದು ಘೋಷಿಸಲಾದ 23 ಅರಬ್ ಡಾಲರ್ ಆರ್ಥಿಕ ನೆರವನ್ನು ಕೂಡ ಅವರು ಶ್ಲಾಘಿಸಿದ್ದಾರೆ.
ನೆರವಿಗಾಗಿ ಸಿದ್ಧ ಎಂದ ADB
ಈ ಕುರಿತು ಮಾತನಾಡಿರುವ ಅಸಕಾವಾ, "ಭಾರತದ ತುರ್ತು ಅಗತ್ಯತೆಗಳನ್ನು ಬೆಂಬಲಿಸಲು ಬದ್ಧವಾಗಿದ್ದು, ಇದಕ್ಕಾಗಿ ನಾವು ಭಾರತಕ್ಕೆ ಸಧ್ಯ 2.2 ಅರಬ್ ಡಾಲರ್ ನೆರವು ನೀಡಲು ಸಿದ್ಧತೆ ನಡೆಸುತ್ತಿದ್ದು, ಈ ನೆರವನ್ನು ಆರೋಗ್ಯ ಕ್ಷೇತ್ರ, ಮಹಾಮಾರಿಯಿಂದ ಬಡವರು, ಕಾರ್ಮಿಕರು MSME ಉದ್ಯಮಗಳ ಮೇಲೆ ಉಂಟಾಗಿರುವ ಆರ್ಥಿಕ ಪರಿಣಾಮ ಪರಿಹಾರಕ್ಕೆ ಬಳಸಲಾಗುವುದು ಎಂದಿದ್ದಾರೆ.
ಇದೇ ವೇಳೆ ಮುಂದೆಯೂ ಕೂಡ ಅಗತ್ಯ ಬಿದ್ದರೆ ಭಾರತಕ್ಕೆ ತನ್ನ ಆರ್ಥಿಕ ಸಹಾಯವನ್ನು ವಿಸ್ತರಿಸಲಿದೆ. ಭಾರತದ ಅಗತ್ಯತೆಗಳನ್ನು ಪೂರೈಸಲು ನಾವು ನಮ್ಮ ಎಲ್ಲ ಹಣಕಾಸಿನ ಆಯ್ಕೆಗಳಾಗಿರುವ ತುರ್ತು ನೆರವು, ನೀತಿ ಆಧಾರಿತ ಸಾಲ ಮತ್ತು ತ್ವರಿತವಾಗಿ ಹಣವನ್ನು ವಿತರಿಸುವ ವ್ಯವಸ್ಥೆಯನ್ನು ಪರಿಶೀಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.