ಅಸ್ಸಾಂ: 45 ಪ್ರಯಾಣಿಕರಿದ್ದ ದೋಣಿ ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆ
45 ಮಂದಿ ಪ್ರಯಾಣಿಕರಿದ್ದ ದೋಣಿಯೊಂದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆಯಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಗವಾಹಟಿ: ಅಸ್ಸಾಂನ ಉತ್ತರ ಗವಾಹಟಿಯಲ್ಲಿ 45 ಮಂದಿ ಪ್ರಯಾಣಿಕರಿದ್ದ ದೋಣಿಯೊಂದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆಯಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
45 ಜನರನ್ನು ಹೊತ್ತೊಯ್ಯುತ್ತಿದ್ದ ಯಾಂತ್ರಿಕ ದೋಣಿ ದಡದಿಂದ 200ಮೀಟರ್ ಮುಂದಕ್ಕೆ ಚಲಿಸುವಷ್ಟರಲ್ಲಿ ಮೊಗುಚಿಕೊಂಡಿದೆ. ಕೂಡಲೇ ಕೆಲವರು ಈಜಿ ದಡ ಸೇರಿದರಾದರೂ, 25ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಎನ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.