Assam Bus Accident: ಅಸ್ಸಾಂನ ದೇರ್ಗಾಂವ್‌ನಲ್ಲಿ ಭೀಕರ ರಸ್ತೆ ಅಪಘಾತ: 14 ಮಂದಿ ಮೃತ, ಹಲವರಿಗೆ ಗಾಯ
Assam Road Accident: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಗೋಲಾಘಾಟ್ ಪೂರ್ವ ತಹಸಿಲ್ ವ್ಯಾಪ್ತಿಗೆ ಬರುವ ದೇರ್ಗಾಂವ್ ಬಳಿಯ ಬಲಿಜನ್ ಗ್ರಾಮದಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
Road Accident Today: 40ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಅಸ್ಸಾಂನ ದೇರ್ಗಾಂವ್‌ನಲ್ಲಿ ನಡೆದಿದೆ.
ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಗೋಲಾಘಾಟ್ ಪೂರ್ವ ತಹಸಿಲ್ ವ್ಯಾಪ್ತಿಗೆ ಬರುವ ದೇರ್ಗಾಂವ್ ಬಳಿಯ ಬಲಿಜನ್ ಗ್ರಾಮದಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 37ರಲ್ಲಿ ನಡೆದ ಈ ಅಪಘಾತದಲ್ಲಿ ಮೃತರನ್ನು ಹೊರತುಪಡಿಸಿ, ಹಲವಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ಅಸ್ಸಾಂನ ದೇರ್ಗಾಂವ್‌ನಲ್ಲಿ ಬುಧವಾರ ಮುಂಜಾನೆ 40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಬಸ್ ತಿನ್ಸುಕಿಯಾದ ತಿಲಿಂಗ ಮಂದಿರಕ್ಕೆ ತೆರಳುತ್ತಿದ್ದಾಗ ನಿಂತಿದ್ದ ಕಲ್ಲಿದ್ದಲು ತುಂಬಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಪಿಕ್ನಿಕ್ ಪ್ರವಾಸದಲ್ಲಿದ್ದ 14 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ- ಟ್ರಾಕ್ಟರ್ ಇನೋವಾ ಕಾರ್ ನಡುವೆ ಅಪಘಾತ
ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ರಸ್ತೆ ಅಪಘಾತದಲ್ಲಿ ಸುಮಾರು 30 ಜನರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜೆಎಂಸಿಎಚ್) ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ನಾಲ್ಕರಿಂದ ಐದು ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂಜಾನೆ ಮೂರು ಗಂಟೆಗೆ ಹೊರಟಿದ್ದ ಬಸ್:
ಮೃತ ದುರ್ದೈವಿಗಳು ಬೋಸಬೋರಹೊಳ್ಳ ಗ್ರಾಮದಿಂದ ಬೋಗಿಬೀಲ್‌ಗೆ ಇಂದು ಒಂದು ದಿನದ ಪಿಕ್ನಿಕ್ ಕೈಗೊಂಡಿದ್ದರು. ಪಿಕ್ನಿಕ್ ಜೊತೆಗೆ ಅವರು ಪ್ರಸಿದ್ಧ ತಿಲಿಂಗ ಮಂದಿರಕ್ಕೆ ಭೇಟಿ ನೀಡುವ ಯೋಜನೆಯನ್ನು ಹೊಂದಿದ್ದರು. ಆದರೆ ಮಾರ್ಗಮಧ್ಯೆ ಬಸ್ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ- ಮೈ ಕೊರೆಯುವ ಚಳಿಗೆ ತತ್ತರಿಸುತ್ತಿದೆ ಉತ್ತರ : ಈ ಪ್ರದೇಶಗಳಲ್ಲಿ ಕೋಲ್ಡ್ ಡೇ ಅಲರ್ಟ್ ಜಾರಿ
ಈ ರಸ್ತೆ ಅಪಘಾತದಲ್ಲಿ ಇದುವರೆಗೆ ಒಂದೇ ಕುಟುಂಬದ ಮೂರ್ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಚಾಲಕನ ಅತಿವೇಗವು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.