ನವದೆಹಲಿ: ಅಸ್ಸಾಂನಲ್ಲಿ ಶುಕ್ರವಾರದಂದು ಇನ್ನೂ ನಾಲ್ಕು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಪೀಡಿತ ಜಿಲ್ಲೆಗಳ ಸಂಖ್ಯೆ 33 ಜಿಲ್ಲೆಗಳಲ್ಲಿ 21ಕ್ಕೆ ಏರಿದೆ. ಪ್ರವಾಹದಿಂದಾಗಿ ಈಗ ಮತ್ತೆ ಮೂವರು ಸಾವನ್ನಪ್ಪಿರುವುದರಿಂದ ಈಗ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ 68 ಆದಾಯ ವಲಯಗಳ 1,556 ಹಳ್ಳಿಗಳಲ್ಲಿ 8.69 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಪೀಡಿತರಾಗಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಸ್ಸಾಂನ ಅತಿ ದೊಡ್ಡ ನಗರವಾದ ಗುವಾಹಟಿಯ ಮೂಲಕ ಹಾದು ಹೋಗುವ ವಿಶ್ವದ ಅತಿದೊಡ್ಡ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರ ನದಿ ಮತ್ತು ಇತರ ಐದು ನದಿಗಳು ಅಪಾಯದ ಗುರುತುಗಿಂತ ಮೇಲಕ್ಕೆ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಈ ವಾರಾಂತ್ಯಕ್ಕೆ ಹೆಚ್ಚಿನ ಮಳೆ ಬಿಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಅಸ್ಸಾಂನಾದ್ಯಂತ ದೋಣಿ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. 


ಅಸ್ಸಾಂ ನಲ್ಲಿನ ಪ್ರವಾಹ ಪೀಡಿತ ಜಿಲ್ಲೆಗಳೆಂದರೆ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಸೋನಿತ್‌ಪುರ, ಡರಾಂಡ್, ಬಕ್ಸಾ, ಬಾರ್‌ಪೇಟಾ, ನಲ್ಬಾರಿ, ಚಿರಾಂಗ್, ಬೊಂಗೈಗಾಂವ್, ಕೊಕ್ರಜಾರ್, ಗೋಲ್‌ಪರಾ, ಮೊರಿಗಾಂವ್, ಹೊಜೈ, ನಾಗಾನ್, ಗೋಲಘಾಟ್, ಮಜುಲಿ, ಜೋರ್‌ಹೌರ್, ಟಿಬ್ರುಗರ್ಹಾಟ್ ಎಂದು ಪಟ್ಟಿ ಮಾಡಲಾಗಿದೆ. ಈಗ 27,000 ಹೆಕ್ಟೇರ್ ಕೃಷಿಭೂಮಿ ಪ್ರವಾಹಕ್ಕೆ ಒಳಗಾಗಿದೆ ಮತ್ತು 7,000 ಕ್ಕೂ ಹೆಚ್ಚು ಜನರನ್ನು ರಾಜ್ಯಾದ್ಯಂತ 68 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.