ಕೋಲ್ಕತ್ತಾ: ಅಸ್ಸಾಂ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್ಸಿ) ಕರಡು ಬಂಗಾಳಿ, ಬಿಹಾರ ಮತ್ತು ಹಿಂದೂಗಳನ್ನು ಟಾರ್ಗೆಟ್ ಮಾಡುವ ಪ್ರಯತ್ನ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ 


COMMERCIAL BREAK
SCROLL TO CONTINUE READING

ನಾಗರಿಕ ರಾಷ್ಟ್ರೀಯ ನೋಂದಣಿಯ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, "ಈ ಯೋಜನೆಯಿಂದ ಪಶ್ಚಿಮ ಬಂಗಾಳಕ್ಕೆ ಹೆಚ್ಚು ಸಮಸ್ಯೆ ಎದುರಾಗಲಿದೆ. ಅಸ್ಸಾಂ ನಾಗರಿಕರಲ್ಲದ 40 ಲಕ್ಷ ಜನರಿಗೆ ತೊಂದೆಯಾಗಲಿದೆ. ಈ ಜನರು ಎಲ್ಲಿಗೆ ಹೋಗುತ್ತಾರೆ? ಎಲ್ಲಿ ವಾಸಿಸುತ್ತಾರೆ? ಬಾಂಗ್ಲಾದೇಶ ಅವರನ್ನು ಮರಳಿ ಬರಲು ಒಪ್ಪಿಗೆ ನೀಡುವುದಿಲ್ಲ" ಎಂದರು.


ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಮತ ಮತ್ತು ವಿಭಜನೆ ರಾಜಕೀಯವನ್ನು ವಿರೋಧಿಸಿದ ಮಮತಾ ಬ್ಯಾನರ್ಜಿ, "ನೀವು ಎಲ್ಲಿಯವರೆಗೆ ಈ ಒಡೆದು ಆಳುವ ನೀತಿಯನ್ನು ಅನುಸರಿಸುತ್ತೀರಿ?  ಇಟ್ಟುಕೊಳ್ಳುತ್ತೀರಿ, ವಿಭಜನೆಯನ್ನು ನೀಡುವುದು ಹೇಗೆ? ಕರಡು ಪ್ರತಿಯಿಂದ ಹೆಸರು ತೆಗೆದುಹಾಕಿರುವ 40 ಲಕ್ಷ ಜನರು ಎಲ್ಲಿಗೆ ಹೋಗುತ್ತಾರೆ? ಇವರಿಗಾಗಿ ಕೇಂದ್ರ ಸರ್ಕಾರ ಯಾವುದಾದರೂ ಪುನರ್ವಸತಿ ಕೇಂದ್ರ ತೆರೆಯಲಿದೆಯೇ? ಅಂತಿಮವಾಗಿ ಇದರಿಂದ ಸಮಸ್ಯೆ ಎದುರಿಸುವುದು ಪಶ್ಚಿಮ ಬಂಗಾಳ. ಇದನ್ನೆಲಾ ಬಿಜೆಪಿ ತನ್ನ ಮತಕ್ಕಾಗಿ ರಾಜಕೀಯ ಮಾಡುತ್ತಿದೆ" ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.


ಆಧಾರ್ ಮತ್ತು ಪಾಸ್ ಪೋರ್ಟ್ಗಳನ್ನು ಹೊಂದಿರುವ ಅದೆಷ್ಟೋ ಜನರ ಹೆಸರೂ ಈ ಕರಡು ಪ್ರತಿಯಲ್ಲಿಲ್ಲ. ಉಪನಾಮ(ಸರ್ ನೇಮ್)ಗಳ ಆಧಾರದ ಮೇಲೆ ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದೆಲ್ಲಾ 40 ಲಕ್ಷ ಜನರನ್ನು ಬಲವಂತವಾಗಿ ಹೊರಹಾಕಲು ಸರ್ಕಾರ ಮಾಡುತ್ತಿರುವ ಪ್ರಯತ್ನವೇ? ಎಂದು ಪ್ರಶ್ನಿಸಿರುವ ಮಮತಾ, ನೀವು ಬಂಗಾಲಿಗಳಿಗೆ ಹೊಡೆದರೆ, ಅವರು ನಿಮಗೆ ಮರಳಿ ಹೊಡೆಯುವುದಿಲ್ಲವೇ? ಬಿಹಾರಿಗಳು, ಮರಾಠಿಗಳು ಅಥವಾ ಗುಜರಾತಿಗಳ ಮೇಲೆ ದಾಳಿ ನಡೆಸಿದರೆ ಅವರು ಪ್ರತಿದಾಳಿ ನಡೆಸುವುದಿಲ್ಲವೇ? ಎಂದು ಕಟುವಾಗಿ ಪ್ರತಿಕ್ರಿಯಿಸಿದರಲ್ಲದೆ, ಪಶ್ಚಿಮ ಬಂಗಾಳದಲ್ಲಿ ಅಸ್ಸಾಮಿಗಳು, ಬಿಹಾರಿಗಳೂ ಇದ್ದಾರೆ ನೆನಪಿಡಿ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.