ಎನ್ಆರ್ಸಿ ಪಟ್ಟಿಯಿಂದ ಅಸ್ಸಾಂ ವಿರೋಧ ಪಕ್ಷದ ಶಾಸಕ ಕೂಡ ಹೊರಕ್ಕೆ..!
ಅಸ್ಸಾಂ ಎರಡನೇ ಪ್ರಬಲ ವಿರೋಧ ಪಕ್ಷ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಶಾಸಕರಾದ ಅನಂತ ಕುಮಾರ್ ಮಾಲೋ ಅವರ ಹೆಸರನ್ನು ಈಗ ಎನ್‌ಆರ್‌ಸಿಯಿಂದ ಹೊರಹಾಕಲಾಗಿದೆ. ಆ ಮೂಲಕ ಈಗ ಈ ಪಟ್ಟಿಯಿಂದ ಹೊರಗಿಟ್ಟಿರುವ 19 ಲಕ್ಷ ಜನರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ನವದೆಹಲಿ: ಅಸ್ಸಾಂ ಎರಡನೇ ಪ್ರಬಲ ವಿರೋಧ ಪಕ್ಷ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಶಾಸಕರಾದ ಅನಂತ ಕುಮಾರ್ ಮಾಲೋ ಅವರ ಹೆಸರನ್ನು ಈಗ ಎನ್‌ಆರ್‌ಸಿಯಿಂದ ಹೊರಹಾಕಲಾಗಿದೆ. ಆ ಮೂಲಕ ಈಗ ಈ ಪಟ್ಟಿಯಿಂದ ಹೊರಗಿಟ್ಟಿರುವ 19 ಲಕ್ಷ ಜನರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ಶನಿವಾರ ಬೆಳಿಗ್ಗೆ ಎನ್ಆರ್ಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿತ್ತು, ಆಗ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಅನಂತ ಕುಮಾರ್ ಮಾಲೋ ಅವರ ಹೆಸರು ವೆಬ್‌ಸೈಟ್‌ನಲ್ಲಿ ಕಾಣೆಯಾಗಿದೆ. ಕಾನೂನು ಬದ್ದ ನಿವಾಸಿಗಳನ್ನು ಗುರುತಿಸುವ ಹಾಗೂ ಅಸ್ಸಾಂನಿಂದ ಅಕ್ರಮ ನಿವಾಸಿಗಳನ್ನು ಹೊರಗಿಡುವ ಉದ್ದೇಶದಿಂದ ಜಾರಿಗೆ ತಂದಂತ ಎನ್ಆರ್ಸಿ ಈಗ ಶಾಸಕರ ಮೇಲೆಯೂ ಪ್ರಭಾವ ಬೀರಿರುವುದು ಬಹುತೇಕರಿಗೆ ಹುಬ್ಬರಿಸುವಂತೆ ಮಾಡಿದೆ.
ಈಗ ಸುಮಾರು 3.11 ಜನರನ್ನು ಪಟ್ಟಿಯಲ್ಲಿ ಸೇರಿಸಿದರೆ, ಇನ್ನೂಳಿದ 19 ಲಕ್ಷಕ್ಕೂ ಅಧಿಕ ಜನರನ್ನು ಪಟ್ಟಿಯಿಂದ ಹೊರಗೆ ಹಾಕಲಾಗಿದೆ.ಇನ್ನೊಂದೆಡೆ ಕೇಂದ್ರ ಸರ್ಕಾರ ಏಕಾಏಕಿ ಪಟ್ಟಿಯಲ್ಲಿ ಇರದ ಜನರನ್ನು ವಿದೇಶಿಯರು ಎಂದು ಘೋಷಿಸುವುದಿಲ್ಲ ಅವರಿಗೆ ನ್ಯಾಯಮಂಡಳಿಗಳ ಮೂಲಕ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಅವರು ಇದರಲ್ಲಿ ಸೋತಲ್ಲಿ ಅವರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೂ ಕೂಡ ಮೊರೆಹೋಗಬಹುದು ಎಂದು ಹೇಳಿದೆ.ಇದಕ್ಕೆ ಈಗ ಸಮಯದ ಮಿತಿಯನ್ನು 60 ರಿಂದ 120 ದಿನಗಳವರೆಗೆ ವಿಸ್ತರಿಸಲಾಗಿದೆ.
ಈ ವಿವಾದಗಳನ್ನು ಆಲಿಸಲು ಕನಿಷ್ಠ 1,000 ನ್ಯಾಯ ಮಂಡಳಿಗಳನ್ನು ಹಂತ ಹಂತವಾಗಿ ಸ್ಥಾಪಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ. 100 ನ್ಯಾಯಮಂಡಳಿಗಳು ಈಗಾಗಲೇ ತೆರೆದಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ ಇನ್ನೂ 200 ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ.