ನವದೆಹಲಿ: ಎಲ್ಲೆಡೆ ಕುರಿ, ಕೋಳಿ, ಮೀನು ತಿನ್ನೋ ಜನ ಸಿಕ್ಕಾಪಟ್ಟೆ ಇದಾರೆ. ಹಾಗಾಗಿ ಎಲ್ಲಾ ಕಡೆ ಇವುಗಳ ಮಾಂಸಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡಿದೆ. ಆದರೆ ಈ ರಾಜ್ಯದ ಗ್ರಾಮವೊಂದರಲ್ಲಿ ಇಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್! ಇಲಿ ಮಾಂಸದಿಂದ ತಯಾರಿಸಿದ ಗ್ರೇವಿ, ಫ್ರೈ ಅಂದ್ರೆ ಜನ ಬಾಯಿ ಇಷ್ಟಪಟ್ಟು ತಿಂತಾರಂತೆ... 


COMMERCIAL BREAK
SCROLL TO CONTINUE READING

ಅಸ್ಸಾಂ ರಾಜ್ಯದ ಬಕ್ಸಾ ಜಿಲ್ಲೆಯ ಕುಮಾರಿಕಟ ಗ್ರಾಮದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಇಲಿಯಿಂದ ತಯಾರಿಸಿದ ಖಾದ್ಯಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಅಂತೆ. ಈಶಾನ್ಯ ಪ್ರದೇಶದ ಕೆಲ ಸಮುದಾಯದವರು ಇಲಿಯನ್ನು ವಿಶೇಷ ಖಾದ್ಯವಾಗಿ ಸೇವಿಸುತ್ತಾರೆ. ಈ ಗ್ರಾಮದಲ್ಲಿ ಕೋಳಿ ಮತ್ತು ಇಲಿ ಮಾಂಸವನ್ನು ಒಂದೇ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಒಂದು ಕೆ.ಜಿ ಕೋಳಿಗೆ 200 ರೂ. ಇದ್ದರೆ, ಅಷ್ಟೇ ಬೆಲೆ ಇಲಿ ಮಾಂಸಕ್ಕೂ ನಿಗದಿಪಡಿಸಲಾಗುತ್ತದೆ.


ಇಲಿ ಮಾಂಸ ಖರೀದಿಸಲು ಗುವಾಹಾಟಿಯಿಂದ 90 ಕಿ.ಮೀ. ದೂರದಲ್ಲಿರುವ ಇಂಡೋ-ಭೂತಾನ್ ಗಡಿಯಲ್ಲಿರುವ ಕುಮಾರಿಕಟ ಗ್ರಾಮದಲ್ಲಿ ನಡೆಯುವ ಭಾನುವಾರ ಮಾರುಕಟ್ಟೆಗೆ ಜನರು ಆಗಮಿಸುತ್ತಾರೆ. ಹಾಗಾಗಿ ಈ ಮಾರುಕಟ್ಟೆಯಲ್ಲಿ ಕೋಳಿ, ಹಂದಿ ಮಾಂಸಕ್ಕಿಂತಲೂ ಇಲಿ ಮಾಂಸ ಸಿಕ್ಕಾಪಟ್ಟೆ ಫೇಮಸ್!