ನವದೆಹಲಿ: ಛತ್ತೀಸ್​ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 15 ವರ್ಷಗಳ ಬಳಿಕ ತನ್ನ ಅಧಿಕಾರ ಕಳೆದುಕೊಳ್ಳುತ್ತಿದೆ. 2000 ಇಸವಿಯಲ್ಲಿ ರಚನೆಯಾದ ಈ ರಾಜ್ಯದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಎರಡನೇ ಬಾರಿಗೆ ಸರ್ಕಾರ ರಚಿಸಲಿದೆ. 2000 ರಲ್ಲಿ ಮಧ್ಯಪ್ರದೇಶ ವಿಭಜನೆಯಾದ ಬಳಿಕ ಛತ್ತೀಸಗಢ ರಚಿಸಲಾಯಿತು. ನಂತರ ಕಾಂಗ್ರೆಸ್ ಸರ್ಕಾರ ರಚನೆಯಾಯಿತು ಮತ್ತು ಅಜಿತ್ ಜೋಗಿ ಮುಖ್ಯಮಂತ್ರಿಯಾದರು. ಛತ್ತೀಸಗಢದಲ್ಲಿ 2003 ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಿತು. ಆ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ವಿಜಯ ಸಾಧಿಸಿದೆ.


COMMERCIAL BREAK
SCROLL TO CONTINUE READING

ಆ ಸಮಯದಲ್ಲಿ ರಮಣ್ ಸಿಂಗ್ ಮುಖ್ಯಮಂತ್ರಿಯಾದರು. ಅಂದಿನಿಂದ ಛತ್ತೀಸಗಢದಲ್ಲಿ ಇನ್ನೂ ಎರಡು ಚುನಾವಣೆಗಳು ನಡೆದವು. 2008 ಮತ್ತು 2013 ರಲ್ಲಿ ಈ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಕಾಂಗ್ರೆಸ್ ಅನ್ನು ಸೋಲಿನ ಅಂಚಿನಲ್ಲಿರಿಸಿತ್ತು. ಆದರೆ 2018 ರಲ್ಲಿ ಆ ಚಿತ್ರ ಬದಲಾಗಿದೆ. ಕಾಂಗ್ರೆಸ್ ಬಹುಮತದತ್ತ ಮುನ್ನುಗ್ಗಿದ್ದು ಸ್ಪರ್ಧೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿದೆ.


ಛತ್ತೀಸಗಢದಲ್ಲಿ ಕಾಂಗ್ರೆಸ್ 50 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುಂದಿದೆ.  ಅದೇ ಸಮಯದಲ್ಲಿ ಬಿಜೆಪಿ 25 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ ರಮಣ್ ಸಿಂಗ್ ರಂತಹ ಪ್ರಮುಖ ನಾಯಕರನ್ನು ಹೊಂದಿದೆ. ಆದರೆ ಕಾಂಗ್ರೆಸ್ ನಲ್ಲಿ ಅಂತಹ ಪ್ರಭಾವಿ ನಾಯಕರಿಲ್ಲ. ಆದರೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದತ್ತ ದಾಪುಗಾಲಾಕುತ್ತಿದೆ.


ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ 2003 ರಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 37 ಸ್ಥಾನಗಳನ್ನು ಗೆದ್ದಿತ್ತು. 2008 ರಲ್ಲಿ ಎರಡನೇ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ  50 ಸ್ಥಾನಗಳನ್ನು ವಶಪಡಿಸಿಕೊಂಡರೆ, ಕಾಂಗ್ರೆಸ್ 38 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. 2013 ರ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳನ್ನು ಪಡೆಯಿತು ಮತ್ತು ಕಾಂಗ್ರೆಸ್ 39 ಸ್ಥಾನಗಳನ್ನು ಪಡೆಯಿತು.